400 ಚಿನೂಕ್‌ ಹೆಲಿಕಾಪ್ಟರ್‌ಗಳ ಸೇವೆ ದಿಢೀರ್‌ ಬಂದ್‌ – ಅಮೆರಿಕದ ಶಾಕಿಂಗ್‌ ನಿರ್ಧಾರ, ಆತಂಕದಲ್ಲಿ ಭಾರತ

Public TV
1 Min Read
Chinook Helicopter

ನವದೆಹಲಿ: ಸೈನಿಕರ ರವಾನೆಯಲ್ಲಿ ಮಹತ್ವದ ಪಾತ್ರ ವಹಿಸುವ ಚಿನೂಕ್ ಹೆಲಿಕಾಪ್ಟರ್‌ಗಳ ಸೇವೆಯನ್ನು ಅಮೆರಿಕ ಸೇನೆ ದಿಢೀರ್ ಬಂದ್ ಮಾಡಿದೆ.

ಬರೋಬ್ಬರಿ 400 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಸೇನೆ ಹೊರಗಿಟ್ಟಿದೆ. ಎಂಜಿನ್‍ನಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷದ ಕಾರಣ ಅಮೆರಿಕ ಸೇನೆಯ ಮೆಟಿರಿಯಲ್ ಕಮಾಂಡ್ ಈ ನಿರ್ಣಯ ತೆಗೆದುಕೊಂಡಿದೆ.

ಈ ಬೆಳವಣಿಗೆ ಭಾರತೀಯ ವಾಯುಸೇನೆಯನ್ನು ಆತಂಕಕ್ಕೆ ತಳ್ಳಿದೆ. ಭಾರತ 15 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುತ್ತಿರುವ ಕಾರಣ ವಿವರಣೆ ನೀಡುವಂತೆ ಕೋರಿ ಅಮೆರಿಕಗೆ ಪತ್ರ ಬರೆದಿದೆ. ಇದನ್ನೂ ಓದಿ: ನಿತೀಶ್‌ ಭೇಟಿ ಬೆನ್ನಲ್ಲೇ ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡಿದ ಕೆಸಿಆರ್‌

Chinook Helicopter IAF 1

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೋಯಿಂಗ್ ಸಂಸ್ಥೆ ನಿರಾಕರಿಸಿದೆ. ಸಮಸ್ಯೆ ಇತ್ಯರ್ಥ ಮಾಡಲು ಅಮೆರಿಕ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಚಿನೂಕ್‍ಗೆ ಎಂಜಿನ್ ಒದಗಿಸಿರುವ ಹನಿವೆಲ್ ಸಂಸ್ಥೆ ತಿಳಿಸಿದೆ. ಈ ಹಿಂದೆ ಹಲವು ಬಾರಿ ಚಿನೂಕ್ ಹೆಲಿಕಾಪ್ಟರ್‌ಗಳ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಸಣ್ಣ ಸಣ್ಣ ಅವಘಡ ನಡೆದಿತ್ತು. ಆದರೆ ಈವರೆಗೂ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.

2015ರ ಸೆಪ್ಟೆಂಬರ್‌ನಲ್ಲಿ ಭಾರತ 8,048 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2019-20 ರಲ್ಲಿ 15 ಚಿನೂಕ್‌ ಹೆಲಿಕಾಪ್ಟರ್‌ಗಳು ಸೇನೆಗೆ ಸೇರಿತ್ತು. ಚಿನೂಕ್‌ ಹೆಲಿಕಾಪ್ಟರ್‌ಗಳು ಕಳೆದ ಮೂರು ವರ್ಷಗಳಿಂದ ಲಡಾಖ್‌ ಎಲ್‌ಎಸಿ ಬಳಿ ಹಾರಾಡುತ್ತಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *