ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ (Russian Oil) ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ಅಮೆರಿಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಅಮೆರಿಕ (America) ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ, 1971ರ ಯುದ್ಧದ ಸಮಯದಲ್ಲಿ ಅಮೆರಿಕ ಪಾಕಿಸ್ತಾನವನ್ನು ಹೇಗೆ ಬೆಂಬಲಿಸಿತು? ಎನ್ನುವ ವರದಿಯೊಂದನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.
ʻಈ ದಿನ ಆ ವರ್ಷʼ – ಯುದ್ಧದ ನಿರ್ಮಾಣ – 05 ಆಗಸ್ಟ್ 1971 #KnowFactsʼ ಎಂಬ ಶೀರ್ಷಿಕೆಯ ಅಡಿ ಸೇನೆಯು ಹಳೆಯ ಪೇಪರ್ ಕಟಿಂಗ್‌ವಿಂದನ್ನ ಪೊಸ್ಟ್ ಮಾಡಿದೆ. ಅಮೆರಿಕವು 1954 ರಿಂದ ಪಾಕಿಸ್ತಾನಕ್ಕೆ (Pakistan) 2 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ ಎಂಬ ಶೀರ್ಷಿಕೆ ಹೊಂದಿರುವ ಪತ್ರಿಕಾ ವರದಿಯನ್ನ ಹಂಚಿಕೊಂಡು ಪಾಕ್ ಪರ ಹೇಗೆ ಕೆಲಸ ಮಾಡಿತು ಎಂದು ತಿವಿದಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ
ರಷ್ಯಾದಿಂದ ಕಚ್ಚಾ ತೈಲ ಖರೀದಿ ಮೂಲಕ ಉಕ್ರೇನ್ (Ukraine) ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಗ್ ಮಾಡುತ್ತಿದೆ ಎನ್ನುವ ಅಮೆರಿಕದ ಹೇಳಿಕೆಗೆ ಭಾರತ ಕೌಂಟರ್ ಕೊಟ್ಟ ಒಂದು ದಿನದ ನಂತರ ಈ ಪೋಸ್ಟ್ ಬಂದಿದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳು ʻಅಸಮರ್ಥನೀಯ ಮತ್ತು ಅಸಮಂಜಸʼ ಎಂದು ಭಾರತ ಕರೆದಿದೆ. ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತವನ್ನ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್
ಪತ್ರಿಕಾ ವರದಿಯಲ್ಲಿ 1954ರಿಂದ 1971ರ ವರೆಗೆ ಅಮೆರಿಕವು ಪಾಕಿಸ್ತಾನಕ್ಕೆ ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಆಯುಧಗಳನ್ನು ಪೂರೈಸಿರುವುದಾಗಿ ವರದಿ ಮಾಡಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ 1971ರ ಬಾಂಗ್ಲಾದೇಶ ಮುಕ್ತಿ ಯುದ್ಧದ ಸಂದರ್ಭದಲ್ಲಿ ಹಾಗೂ ಆಪರೇಷನ್ ವಿಜಯ್ ವರ್ಷದಲ್ಲಿ ಬಳಕೆ ಮಾಡಿದೆ ಎನ್ನುವುದು ಉಲ್ಲೇಖಿಸುತ್ತದೆ. ಇದನ್ನೂ ಓದಿ: ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ