– ತನ್ನ ನಿವಾಸದಲ್ಲಿ ಝೆಲೆನ್ಸ್ಕಿ ಜೊತೆ ಮಾತುಕತೆ
– ಸಭೆಗೂ ಮುನ್ನ ಪುಟಿನ್‌ಗೆ ಟ್ರಂಪ್ ಕರೆ
ವಾಷಿಂಗ್ಟನ್: ರಷ್ಯಾ ಉಕ್ರೇನ್ (Russia-Ukraine War) ನಡುವಿನ ಯುದ್ಧ ಕೊನೆಯಾಗುವ ಹತ್ತಿರದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ( Volodymyr Zelenskyy) ಅವರೊಂದಿಗೆ ತನ್ನ ಖಾಸಗಿ ನಿವಾಸ ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಭಾನುವಾರ ಟ್ರಂಪ್ ಮಹತ್ವದ ಸಭೆ ನಡೆಸಿದರು.
ಎರಡು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ಟ್ರಂಪ್, ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ 95% ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ʻಬಂಕರ್‌ಗಳಲ್ಲಿ ಅವಿತುಕೊಳ್ಳೋಣʼ – ಆಪರೇಷನ್ ಸಿಂಧೂರ ದಾಳಿಯ ಭೀಕರತೆ ನೆನಪಿಸಿಕೊಂಡ ಪಾಕ್ ಅಧ್ಯಕ್ಷ
Happening Now—President Trump welcomes Zelensky to Mar-a-Lago… pic.twitter.com/Meye6YMuUu
— Dan Scavino (@Scavino47) December 28, 2025
ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್ ಪುಟಿನ್‌ಗೆ(Vladimir Putin) ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಸಂಬಂಧ ಮಾತನಾಡಿದ್ದರು. ಯುದ್ಧ ಮುಗಿಸುವ ಸಂಬಂಧ ಟ್ರಂಪ್ ಉಕ್ರೇನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: 36 ಗಂಟೆಗಳಲ್ಲಿ 80 ಡ್ರೋನ್ ದಾಳಿ – ಭಾರತದ ದಾಳಿಯಲ್ಲಿ ನೂರ್ ಖಾನ್ ವಾಯುನೆಲೆ ಧ್ವಂಸ; ಸತ್ಯ ಒಪ್ಪಿಕೊಂಡ ಪಾಕ್
ಮುಖ್ಯವಾಗಿ ಡಾನ್‌ಬಾಸ್ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ. ರಷ್ಯಾ ಡಾನ್‌ಬಾಸ್ ಪ್ರದೇಶದ 90% ಜಾಗವನ್ನು ಆಕ್ರಮಿಸಿಕೊಂಡಿದೆ. ಲುಹಾನ್ಸ್ಕ್ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ.

