ವಾಷಿಂಗ್ಟನ್: ಸೇನಾ ಸಮವಸ್ತ್ರದಲ್ಲಿ ಇರುವಾಗ ಹಣೆಗೆ ತಿಲಕ ಇಟ್ಟುಕೊಳ್ಳಲು ಭಾರತೀಯ ಮೂಲದ ವಾಯುಪಡೆ ಅಧಿಕಾರಿ ದರ್ಶನ್ ಶಾಗೆ ಅಮೆರಿಕ ಅನುಮತಿ ನೀಡಿದೆ.
ಭಾರತೀಯ ಮೂಲದ ದರ್ಶನ್ ಶಾ ಅವರು ಇಎಫ್ ವಾರೆನ್ ಏರ್ ಫೋರ್ಸ್ ಬೇಸ್ ವ್ಯೋಮಿಂಗ್‍ನಲ್ಲಿ ಏರ್‍ಮ್ಯಾನ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಅವರಿಗೆ ಸಮವಸ್ತ್ರದಲ್ಲಿರುವಾಗ ತಿಲಕವನ್ನು ಇಟ್ಟುಕೊಳ್ಳಲು ಅಮೆರಿಕ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಹೀಗಾಗಿ ದರ್ಶನ್ ಶಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನಿಡಿರುವ ಅವರು, ತಿಲಕ ಧರಿಸಿ ಕೆಲಸ ಮಾಡುವುದು ಅದ್ಭುತ ಅನುಭವ. ನನಗೆ ಅವಕಾಶ ನೀಡಿದ ಅಮೆರಿಕ ವಾಯುಪಡೆಗೆ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪಾಕ್ ಪ್ರಧಾನಿಗೆ 50,000 ರೂ. ದಂಡ
Advertisement
Advertisement
ವಾಯುಪಡೆಯಲ್ಲಿ ಧಾರ್ಮಿಕ ಸಂಕೇತವಾಗಿರುವ ತಿಲಕ ಧರಿಸಲು ಅವಕಾಶ ನೀಡಿರುವುದಕ್ಕೆ ನನ್ನ ಹೆತ್ತವರು ತುಂಬಾನೇ ಸಂತಸಗೊಂಡಿದ್ದಾರೆ. ಅಲ್ಲದೆ ಟೆಕ್ಸಾಸ್, ಕ್ಯಾಲಿಪೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‍ನಲ್ಲಿರುವ ನನ್ನ ಸ್ನೇಹಿತರು ಕೂಡ ಶುಭ ಕೋರಿರುವುದಾಗಿ ದರ್ಶನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!
ಏರ್ ಫೋರ್ಸ್‍ನಲ್ಲಿ ಈ ರೀತಿಯ ಘಟನೆ ನಡೆದಿರುವುದು ಅವರಿಗೆ ತುಂಬಾ ಸಂತೋಷವಾಗಿದೆ ಎಂದು ಶಾ ಹೇಳಿದರು. ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?