– ಮತ್ತೆ ಭಾರತದ ವಿರುದ್ಧ ʻದೊಡ್ಡಣ್ಣʼ ಕೆಂಗಣ್ಣು
ವಾಷಿಂಗ್ಟನ್: ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕ ಸುಂಕದ (tariff) ವಿಚಾರ ಬಿಡುವಂತೆ ಕಾಣುತ್ತಿಲ್ಲ. ಇಂದು ಶ್ವೇತಭವನ ನೀಡಿದ ಹೇಳಿಕೆ ಭಾರತದ ಮೇಲೆ ಕೆಂಗಣ್ಣು ಬೀರಿದಂತೆ ಕಾಣುತ್ತಿದೆ. ಹೌದು. ಭಾರತವು (India) ನಮ್ಮ ಉತ್ಪನ್ನಗಳ ಮೇಲೆ ಭಾರತ ಭಾರಿ ಸುಂಕ ವಿಧಿಸುತ್ತಿದೆ ಎಂದು ಶ್ವೇತಭವನ ಹೇಳಿದೆ.
#WATCH | Washington, DC: Press Secretary Karoline Leavitt says, “…Look at India, 150 per cent tariff on American alcohol. Do you think that’s helping Kentucky Bourbon be exported to India? I don’t think so. 100 per cent tariff on agricultural products from India…President… pic.twitter.com/fctjCHogsv
— ANI (@ANI) March 11, 2025
ಭಾರತವು ಅಮೆರಿಕದ ಮದ್ಯದ ಮೇಲೆ ಶೇ.150 ಹಾಗೂ ಕೃಷಿ ಉತ್ಪನ್ನಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿದೆ ಎಂದು ಹೇಳಿದೆ. ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಶ್ವೇತಭವನ (White House) ಈ ರೀತಿಯ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಿಂದ ಜಾರಿಗೆ ಬರುವಂತೆ ಹೊಸ ಸುಂಕ ಪದ್ಧತಿಯನ್ನು ಘೋಷಿಸಿದ್ದಾರೆ. ವಿವಿಧ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ವಿಧಿಸುವ ಸುಂಕದಷ್ಟೇ ಅಮೆರಿಕ ಕೂಡ ಆ ದೇಶದ ಉತ್ಪನ್ನಗಳ ಮೇಲೆ ಏಪ್ರಿಲ್ 2ರಿಂದ ಸುಂಕವನ್ನು ವಿಧಿಸಲಿದೆ. ಇದರ ಬೆನ್ನಲ್ಲೇ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಭಾರತ ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಆದರೆ, ಸುಂಕ ಕಡಿತದ ಬಗ್ಗೆ ತಾನೂ ಯಾವುದೇ ಭರವಸೆಯನ್ನು ನೀಡಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.
ಈ ಬೆನ್ನಲ್ಲೇ ವೈಟ್ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ (Karoline Leavitt) ಭಾರತ ವಿಧಿಸುತ್ತಿರುವ ಸುಂಕವನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಟ್ರಂಪ್ ಕೂಡ ಭಾರತದಲ್ಲಿ ಯಾವುದೇ ಉತ್ಪನ್ನ ಮಾರಾಟ ಮಾಡಲು ಆಗಲ್ಲ ಎಂದು ಟೀಕಿಸಿದ್ದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀವಿಟ್, ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ. ಆದ್ರೆ ಅದಕ್ಕೆ ನ್ಯಾಯಯುತ ಮತ್ತು ಸಮತೋಲಿತ ವ್ಯಾಪಾರ ಪದ್ಧತಿಯು ಬೇಕೆಂಬುದು ಅವರ ವಾದ ಎಂದಿದ್ದಾರೆ.
ಇದೇ ವೇಳೆ ಕೆನಡಾ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕೆನಡಾ ಸಹ ಅಮೆರಿಕ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕವು ದಶಕಗಳಿಂದ ಅಮೆರಿಕ ಹಾಗೂ ಅಮೆರಿಕನ್ನರ ಶ್ರಮವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ