ಚೆನ್ನೈ: ಅಮೆರಿಕದ (America) ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಜೆನ್ನಿಫರ್ ಆರ್. ಲಿಟಲ್‌ಜಾನ್ ಅವರು ಆಗಸ್ಟ್ 22 ಮತ್ತು 23 ರಂದು ಚೆನ್ನೈಗೆ ಭೇಟಿ ನೀಡಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂವಾದ ನಡೆಸಿದರು.
ಜೀವ ವೈವಿಧ್ಯವನ್ನು ಸಂರಕ್ಷಿಸುವುದರಿಂದ ಹಿಡಿದು ಹವಾಮಾನ ಸಂಕಷ್ಟವನ್ನು ಎದುರಿಸುವವರೆಗೆ ಯುಎಸ್-ಭಾರತ(India) ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರವು ನಮ್ಮ ಜಗತ್ತಿನ ಅತ್ಯಂತ ದೊಡ್ಡ ಸವಾಲುಗಳನ್ನು ಪರಿಹರಿಸಲು ಪ್ರಮುಖವಾಗಿದೆ. ಇದು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ (ಐಸಿಇಟಿ) ಯು.ಎಸ್. ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದೆ. ನಾವೆಲ್ಲಾ ಒಟ್ಟಿಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸಬಹುದು ಮತ್ತು ಸಮೃದ್ಧಿ ಸಾಧಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಬೇರೆ ಕಂಪನಿಗಳನ್ನು ಆಕರ್ಷಿಸಲು, ರಾಜ್ಯದ ಹಿತದೃಷ್ಟಿಯಿಂದ ಜಿಂದಾಲ್‌ಗೆ ಭೂಮಿ: ಪರಮೇಶ್ವರ್
ಶ್ರೀಪೆರಂಬದೂರಿನಲ್ಲಿರುವ ಅಮೆರಿಕದ ಸೌರ ತಂತ್ರಜ್ಞಾನ ಕಂಪನಿ ಫಸ್ಟ್ ಸೋಲಾರ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿ ಲಿಟಲ್‌ಜಾನ್ ಅವರು ಸೌರ ಶಕ್ತಿ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಅಭ್ಯಾಸಗಳ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ಹಸಿರು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸ್ಟಾರ್ಟ್ಅಪ್‌ಗಳಿಗೆ ಮೀಸಲಾದ ಸ್ಥಳಗಳನ್ನು ವೀಕ್ಷಿಸಿದರು. ಇದನ್ನೂ ಓದಿ: Maharashtra | ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್ ಪತನ – ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರ
ಅಣ್ಣಾ ವಿಶ್ವವಿದ್ಯಾಲಯದಲ್ಲಿ, ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿ ಲಿಟಲ್‌ಜಾನ್ ಅವರು ಸ್ಥಳೀಯ ಚೇತರಿಸಿಕೊಳ್ಳುವ (ರಿಸಲಿಯನ್ಸ್) ಕಾರ್ಯತಂತ್ರಗಳನ್ನು ಬಲಪಡಿಸಲು ಹವಾಮಾನ ಮಾಡೆಲಿಂಗ್ ಬಳಸಿಕೊಳ್ಳುವ ಬಗ್ಗೆ ಅಧ್ಯಾಪಕರು, ಸಂಶೋಧಕರು ಮತ್ತುವಿದ್ವಾಂಸರೊಂದಿಗೆ ಚರ್ಚಿಸಿದರು. ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 11 ಭಾರತೀಯ ಮೀನುಗಾರರ ಬಂಧನ – ಬಿಡುಗಡೆಗೆ ಸ್ಟಾಲಿನ್ ಮನವಿ
ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ -ಸಾಗರಗಳು, ಅಂತರಾಷ್ಟ್ರೀಯ ಪರಿಸರ, ಮತ್ತು ವೈಜ್ಞಾನಿಕ ವ್ಯವಹಾರ ಜೆನ್ನಿಫರ್ ಆರ್. ಲಿಟಲ್‌ಜಾನ್ ಆಗಸ್ಟ್ 23 ರಂದು ಚೆನ್ನೈನ ಅಣ್ಣಾವಿಶ್ವವಿದ್ಯಾಲಯದಲ್ಲಿ ಚೇತರಿಸಿಕೊಳ್ಳುವ (ರಿಸಲಿಯನ್ಸ್) ಕಾರ್ಯತಂತ್ರಗಳನ್ನು ಬಲಪಡಿಸಲು ಹವಾಮಾನ ಮಾಡೆಲಿಂಗ್ ಬಳಸಿಕೊಳ್ಳುವ ಬಗೆಗಿನ ಸಭೆಯಲ್ಲಿ ಭಾಗವಹಿಸಿದರು. ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಮುಖ್ಯಸ್ಥ ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್, ಅಣ್ಣಾ ವಿಶ್ವವಿದ್ಯಾಲಯದ ಜಲಸಂಪನ್ಮೂಲ ಕೇಂದ್ರದ ಪ್ರೊ.ಡಾ. ಆರ್. ಸರವಣನ್, ಅಣ್ಣಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವ್ಯವಹಾರಗಳ ಕೇಂದ್ರದ ಪ್ರೊ.ಡಾ. ಭಾಸ್ಕರನ್, ಅಣ್ಣಾ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಜೆ . ಪ್ರಕಾಶ್ ಚಿತ್ರದಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ ಇದೆ: ಸಿಎಂ
ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ -ಸಾಗರಗಳು, ಅಂತರಾಷ್ಟ್ರೀಯಪರಿಸರ, ಮತ್ತು ವೈಜ್ಞಾನಿಕ ವ್ಯವಹಾರ ಜೆನ್ನಿಫರ್ ಆರ್. ಲಿಟಲ್‌ಜಾನ್ ಅವರು, ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಮುಖ್ಯಸ್ಥ ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್, ಅಮೇರಿಕ ನಿಯೋಗದ ಸದಸ್ಯರು ಮತ್ತು ಚೆನ್ನೈನ ಐಐಟಿ ಮದ್ರಾಸ್ ರೀಸರ್ಚ್ ಪಾರ್ಕ್ ತಂಡದ ಸದಸ್ಯರೊಂದಿಗೆ ಐಐಟಿ ಎಂಆರ್ಪಿ ಕ್ಯಾಂಪಸ್ ನಲ್ಲಿ ಗುರುವಾರ ಆಗಸ್ಟ್ 22ರಂದು ಚಿತ್ರಕ್ಕೆ ಪೋಸು ನೀಡಿದರು. ಇದನ್ನೂ ಓದಿ: ಮೋದಿ, ಯೋಗಿಯನ್ನು ಹೊಗಳಿದ್ದಕ್ಕೆ ಹೆಂಡತಿ ಮುಖಕ್ಕೆ ಬಿಸಿ ಸಾಂಬಾರ್ ಎರಚಿ ತಲಾಖ್ ನೀಡಿದ ಪತಿ