ವಾಷಿಂಗ್ಟನ್: ಅಮೆರಿಕದ (US) ಅರ್ಕಾನ್ಸಾಸ್ ಮತ್ತು ಇಲಿನಾಯ್ಸ್ ರಾಜ್ಯಗಳಲ್ಲಿ ಬೀಸಿದ ಭೀಕರ ಸುಂಟಗಾಳಿಗೆ (Tornado) ಅಪಾರ ಪ್ರಮಾಣದ ನಷ್ಟವುಂಟಾಗಿದ್ದು, 7 ಜನರು ಸಾವಿಗೀಡಾಗಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ.
ಹವಾಮಾನ ವೈಪರಿತ್ಯ ಪರಿಣಾಮವಾಗಿ ಮಿಸೌರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಘಟನೆ ಕುರಿತು ಮಾತನಾಡಿದ ಲಿಟಲ್ ರಾಕ್‌ನ ಮೇಯರ್ ಫ್ರಾಂಕ್ ಸ್ಕಾಟ್ ಜೂನಿಯರ್, ಕನಿಷ್ಠ 30 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ಹೇಳಿದರು. ಚಂಡಮಾರುತವು ವ್ಯಾಪಾರಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು
Advertisement
Advertisement
ಭೀಕರ ಸುಂಟರಗಾಳಿಗೆ ನಾರ್ತ್ ಲಿಟಲ್ ರಾಕ್‌ನಲ್ಲಿ ಒಬ್ಬ ಮತ್ತು ವೈನ್ನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಲ್ವಿಡೆರೆಯಲ್ಲಿನ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ಸಾವಿಗೀಡಾಗಿದ್ದಾನೆ. ಥಿಯೇಟರ್‌ನಲ್ಲಿ 260 ಜನರಿದ್ದರು. ಅವರ ಪೈಕಿ 28 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲ್ಲಿವಾನ್ ಕಂಟ್ರಿ, ಇಂಡಿನಲ್ಲಿ, ಶೆರ್ಮನ್‌ನ ಪೂರ್ವಕ್ಕೆ ಸರಿಸುಮಾರು 150 ಮೈಲುಗಳಷ್ಟು ಸುಂಟರಗಾಳಿ ಭೀಕರವಾಗಿ ಬೀಸಿದ್ದು, ಈ ಭಾಗದಲ್ಲಿ ಮೂರು ಮೃತಪಟ್ಟಿದ್ದಾರೆ.
Advertisement
ಇಂಡಿಯಾನಾ, ಇಲಿನಾಯ್ಸ್, ಅರ್ಕಾನ್ಸಾಸ್ ಮತ್ತು ಟೆನ್ನೆಸ್ಸೀಯಲ್ಲಿ ಸುಮಾರು 4,50,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ವ್ಯಾಪಾರ, ವ್ಯವಹಾರಕ್ಕೆ ತೊಂದರೆಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ 11 ಮಂದಿ ಸಾವು
Advertisement
ಕಳೆದ ವಾರ ಅಮೆರಿಕದ (America) ದಕ್ಷಿಣ ರಾಜ್ಯ ಮಿಸಿಸಿಪ್ಪಿಯಲ್ಲಿ ಬೀಸಿದ ಸುಂಟರಗಾಳಿಗೆ ಕನಿಷ್ಠ 25 ಮಂದಿ ಮೃತಪಟ್ಟಿದ್ದರು. ಅಪಾರ ಪ್ರಮಾಣ ಹಾನಿ ಕೂಡ ಸಂಭವಿಸಿತ್ತು.