ಮುಂಬೈ: ಮಿಸ್ ಯುನಿವರ್ಸ್ 2021ರ ಇವೆಂಟ್ನಲ್ಲಿ ಐರಾವತ ಚಿತ್ರದ ನಾಯಕಿ ಊರ್ವಶಿ ರೌಟೇಲಾ, 40 ಲಕ್ಷ ರೂ. ಮೌಲ್ಯದ ಉಡುಪು ಧರಿಸಿ ಸಖತ್ ಗ್ಲಾಮರ್ ಆಗಿ ಮಿಂಚಿದ್ದಾರೆ.
ಊರ್ವಶಿಯು ಬಾಲಿವುಡ್ನ ಮೋಸ್ಟ್ ಸ್ಟೈಲಿಶ್ ಮತ್ತು ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಈ ಸ್ಟೈಲಿಶ್ ಲುಕ್ನಿಂದಲೇ ಎಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಆದರೆ ಅವರ ಐಷಾರಾಮಿ ಲೈಫ್ ಸ್ಟೈಲ್ ಜೊತೆಗೆ ಅವರು ತೊಡುವ ಉಡುಪುಗಳು ಸಹ ತುಂಬಾ ದುಬಾರಿಯಾಗಿರುತ್ತವೆ. ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್ಗೆ ಚಿತ್ರರಸಿಕರಿಂದ ಬಹುಪರಾಕ್
Advertisement
Advertisement
ಇತ್ತೀಚಿಗೆ ನಡೆದ ಮಿಸ್ ಯುನಿವರ್ಸ್ 2021ರ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಊರ್ವಶಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕಪ್ಪು ಬಣ್ಣದ ನೆಟ್ ಡ್ರೆಸ್ ಧರಿಸಿ ನೋಡುಗರ ಗಮನ ಸೆಳೆದಿದ್ದಾರೆ.
Advertisement
Advertisement
ನಟಿಯ ಈ ಡ್ರೆಸ್ ಬೆಲೆ 40 ಲಕ್ಷ ರೂ. ಆಗಿದ್ದು, ಈ ಡ್ರೆಸ್ನಲ್ಲಿ ಅಂತಹದೇನಿದೆ ಎಂದು ನೀವು ಯೋಚಿಸುತ್ತಿರಬೇಕು. ಊರ್ವಶಿಯ ಹಾಲ್ಟರ್ ಡೀಪ್ ನೆಕ್ ಕಪ್ಪು ಬಣ್ಣದ ಈ ಡ್ರೆಸ್ ಮೇಲೆ ಸುಂದರವಾದ ಗೋಲ್ಡನ್ ವರ್ಕ್ ಮಾಡಲಾಗಿದೆ. ಈ ಡ್ರೆಸ್ನ ವೈಶಿಷ್ಟ್ಯವೆನೆಂದರೆ ಅವರು ಉಡುಗೆಗೆ ಹೊಂದಿಕೊಂಡಿರುವ ಮ್ಯಾಚಿಂಗ್ ನೆಟ್ವೆಲ್ ಹಾಗೂ ಎರಡು ಕೈಗಳ ಭುಜದ ಮೇಲೆ ಅವರು ಅದನ್ನು ಕಟ್ಟಿಕೊಂಡಿದ್ದು ಮತ್ತು ನೆಟ್ ರೀತಿಯ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದನ್ನು ನೀವು ಕಾಣಬಹುದಾಗಿದೆ. ಇದನ್ನೂ ಓದಿ: ‘ಪುಷ್ಪ’ ಸಿನಿಮಾದ ರೋಮ್ಯಾಂಟಿಕ್ ಸೀನ್ಗೆ ಬಿತ್ತು ಕತ್ತರಿ