ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಒಂದು ಗೌನ್ ಧರಿಸಿ ನಾಲ್ಕು ಸೀಟಿನಲ್ಲಿ ಕುಳಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಊರ್ವಶಿ ಫಿಲ್ಮ್‌ಫೇರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಗೌನ್ ಧರಿಸಿದ್ದು, ಸಾಕಷ್ಟು ಭಾರ ಕೂಡ ಇತ್ತು. ಗೌನ್ ಭಾರವಾಗಿದ್ದ ಕಾರಣ ಊರ್ವಶಿಗೆ ಅದನ್ನು ನಿಭಾಯಿಸಲು ಕಷ್ಟವಾಗಿತ್ತು.
ಊರ್ವಶಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಊರ್ವಶಿ ಕೆಂಪು ಬಣ್ಣದ ಗೌನ್ ಧರಿಸಿ ಕುಳಿತಿದ್ದಾರೆ. ಆದರೆ ಅವರ ತಂಡದ ಮೂರು- ನಾಲ್ಕು ಮಂದಿ ಊರ್ವಶಿಯ ಗೌನ್ ಸರಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೋ ಹಾಕಿ ಊರ್ವಶಿ ತಮ್ಮ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ವಿಡಿಯೋದಲ್ಲಿ ಊರ್ವಶಿ ಅವರಿಗೆ ಒಂದು ಸೀಟಿನಲ್ಲಿ ಕುಳಿತುಕೊಳ್ಳಲು ಆಗಲಿಲ್ಲ. ಅವರ ಗೌನ್‍ಗಾಗಿಯೇ ಎರಡರಿಂದ ಮೂರು ಸೀಟ್ ಬೇಕಾಯಿತು. ಊರ್ವಶಿ ಅವರ ಗೌನ್‍ಗಾಗಿ ಎರಡರಿಂದ ಮೂರು ಸೀಟ್‍ಗನ್ನು ಖಾಲಿ ಮಾಡಿಸಲಾಯಿತು.
ಸದ್ಯ ಊರ್ವಶಿ ಪೋಸ್ಟ್ ಮಾಡಿದ ವಿಡಿಯೋ ನೋಡಿ ಕೆಲವರು, ‘ಈ ಗೌನ್ ಧರಿಸಿ ಕೂರಲು ಬೇರೆಯೇ ಸೀಟ್ ಬೇಕಾಗುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ನೀವು ಒಂದು ಸೀಟಿನಲ್ಲಿ ಕುಳಿತಿದ್ದೀರಾ, ಆದರೆ ನಿಮ್ಮ ಗೌನ್‍ಗೆ ನಾಲ್ಕು ಸೀಟ್ ಬೇಕಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ.