ಕನ್ನಡದ ‘ಐರಾವತ’ ನಟಿ ಊರ್ವಶಿ ರೌಟೇಲಾ (Urvashi Rautela) ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹಾರರ್ ಸಿನಿಮಾವೊಂದರನ್ನು ಒಪ್ಪಿಕೊಂಡಿದ್ದಾರೆ. ಬೆಚ್ಚಿ ಬೀಳಿಸಲು ಹಾಟ್ ಬೆಡಗಿ ಊರ್ವಶಿ ಬರುತ್ತಿದ್ದಾರೆ.
ಊರ್ವಶಿಗೆ ಸಿನಿಮಾ ಆಫರ್ಸ್ ಸಿಗುತ್ತಿವೆ ಆದರೆ ಸಕ್ಸಸ್ ಸಿಗುತ್ತಿಲ್ಲ. ಸ್ಟಾರ್ ನಟರ ಜೊತೆ ನಟಿಸಿದರು. ಐಟಂ ಹಾಡಿಗೆ ಹೆಜ್ಜೆ ಹಾಕಿದ್ರೂ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಗಲಿಲ್ಲ. ಇದೀಗ ವಿಭಿನ್ನ ಪ್ರಯತ್ನಕ್ಕೆ ನಟಿ ಮುಂದಾಗಿದ್ದಾರೆ. ಇದನ್ನೂ ಓದಿ:ಸೋನಾಕ್ಷಿ ಸಿನ್ಹಾ, ಝಹೀರ್ ಆರತಕ್ಷತೆಯಲ್ಲಿ ಬಾಲಿವುಡ್ ಸೆಲೆಬ್ರಿಟೀಸ್
ನಟ ಅಫ್ತಾಬ್ ಶಿವದಾಸನಿ ಜೊತೆ ರೊಮ್ಯಾನ್ಸ್ ಮಾಡೋಕೆ ಊರ್ವಶಿ ರೆಡಿಯಾಗಿದ್ದಾರೆ. ಮುಂದಿನ ಚಿತ್ರ ‘ಕಸೂರ್’ (Kasoor Film) ಪ್ರಾಜೆಕ್ಟ್‌ನಲ್ಲಿ ಹಾರರ್ ಕಮ್ ರೊಮ್ಯಾಂಟಿಕ್ ಸಿನಿಮಾ ಕಥೆ ಹೇಳೋಕೆ ತಂಡ ಸಜ್ಜಾಗಿದೆ.
ಹೊಸ ಜೋಡಿಯನ್ನು ಹೊಸ ಕಥೆ ಮೂಲಕ ಅದ್ಧೂರಿಯಾಗಿ ತೋರಿಸಲು ನಿರ್ಮಾಣ ಸಂಸ್ಥೆ ಪ್ಲ್ಯಾನ್ ಮಾಡಿದೆ. ಈ ಚಿತ್ರಕ್ಕಾಗಿ ನಟಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ.