ಬೀದರ್: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಅನಾರೋಗ್ಯದಿಂದ (Health) ಆಸ್ಪತ್ರೆಗೆ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್‍ಡಿಕೆಯವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಯೊಬ್ಬರು ಉರುಳು ಸೇವೆ ಮಾಡಿದ್ದಾರೆ.
ಗಡಿ ಜಿಲ್ಲೆ ಬೀದರ್ (Bidar) ನ ಅಭಿಮಾನಿ, ಬಸವಕಲ್ಯಾಣ ತಾಲೂಕಿನ ಜೆಡಿಎಸ್ (JDS) ಪಕ್ಷದ ಉಪಾಧ್ಯಕ್ಷ ಶರಣಪ್ಪ ಪರೇಪ್ಪ ಈ ಸೇವೆಯನ್ನು ಕೈಗೊಂಡಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಕುಮಾರಸ್ವಾಮಿಯ ಫೋಟೋ ಜೊತೆ ಉರುಳು ಸೇವೆ ಮಾಡಿದ್ದಾರೆ.
ಹೆಚ್‍ಡಿಕೆ ಆರೋಗ್ಯದಲ್ಲಿ ಬೇಗ ಚೇತರಿಕೆ ಕಂಡು ಮತ್ತೆ ಎಂದಿನಂತೆ ಜನ ಸೇವೆ ಮಾಡಲಿ ಎಂದು ಉರುಳು ಸೇವೆ ಬಳಿಕ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಯನ್ನು ಪ್ರಶ್ನಿಸಿದವರಿಗೆ ಹೈಕೋರ್ಟ್ ತರಾಟೆ
ಸದ್ಯ ಅಪೊಲೋ ಆಸ್ಪತ್ರೆಯಲ್ಲಿ ಮಾಜಿ ಸಿಎಂಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಾಧ್ಯತೆ ಕಡಿಮೆ ಇದ್ದು, ಇಂದು ಅಥವಾ ನಾಳೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸೋ ಸಾಧ್ಯತೆ ಇದೆ. ಇವತ್ತು ಬಿಜೆಪಿ ನಾಯಕರು, ಕೆಲ ಸಚಿವರು ಸೇರಿದಂತೆ ಗಣ್ಯರ ಆಗಮಿಸಿ ಮಾಜಿ ಸಿಎಂ ಆರೋಗ್ಯ ವಿಚಾರಿಸಲಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಆರೋಗ್ಯ ವಿಚಾರಿಸಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]