ಬಾಲಿವುಡ್‌ನ (Bollywood) ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ (Vikram Gaikwad) ಅವರು ನಿಧನರಾಗಿದ್ದಾರೆ. ಮುಂಬೈ ನಿವಾಸದಲ್ಲಿ ಮೇ 10ರಂದು ಬೆಳಗ್ಗೆ ಅವರು ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್ ತಾರೆಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ
ವಿಕ್ರಮ್ ಗಾಯಕ್‌ವಾಡ್ ನಿಧನಕ್ಕೆ ಕಾರಣವೇನು ಎಂಬುದು ರಿವೀಲ್ ಆಗಿಲ್ಲ. ಅವರ ನಿಧನಕ್ಕೆ ಆಮೀರ್ ಖಾನ್ (Aamir Khan), ರಣವೀರ್ ಸಿಂಗ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!
ಅಂದಹಾಗೆ, ಸಂಜು, ಪಿಕೆ, ದಂಗಲ್, ರಂಗ್ ದೆ ಬಸಂತಿ, 3 ಈಡಿಯಟ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ವಿಕ್ರಮ್ ಕೆಲಸ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ತಾರೆಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.