ಉರ್ಫಿ ಜಾವೇದ್ ಬೋಲ್ಡ್ ಅವತಾರದ ಮೂಲಕ ಸುದ್ದಿಯಾಗಿರುವ ನಟಿ. ಈಕೆಯ ಹೆಸರು ಬಂದರೆ ಸಾಕು, ಅಬ್ಬಬ್ಬ ಉರ್ಫಿ ಈ ಬಾರಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾಳೆ, ಯಾವ ಅವತಾರದಲ್ಲಿ ಬರಲಿದ್ದಾಳೆ. ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದೇ ಹೆಚ್ಚು ಸುದ್ದಿ ಆಗುತ್ತಾಳೆ.
ಪ್ರತಿದಿನ ಉರ್ಫಿಯ ಹಿಂದೆ ಕ್ಯಾಮೆರಾಗಳು ಸಾಲು ಗಟ್ಟಿ ನಿಲ್ಲುತ್ತವೆ. ನಿತ್ಯವೂ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸ, ಹೊಸದಾಗಿ ಡ್ರೆಸ್‌ಗಳನ್ನು ಪ್ರಯೋಗ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ಹಾಗಾಗಿ ಆಕೆಯ ವಿಚಿತ್ರ ಅವತಾರ ನೋಡಲೆಂದೇ ಹಲವು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಇದನ್ನೂ ಓದಿ:ಯಂಗ್ ಟೈಗರ್ -ಪ್ರಶಾಂತ್ ನೀಲ್ ಚಿತ್ರಕ್ಕೆ ಶಿವಣ್ಣನ ಸಿನಿಮಾದ ಟೈಟಲ್ ಫಿಕ್ಸ್
ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಫಿ ಈ ಬಾರಿಯೂ ತಮ್ಮ ಬೋಲ್ಡ್ ಅವತಾರದೊಂದಿಗೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲಾ ಟ್ರೋಲ್‌ಗೂ ಕೂಡ ಉರ್ಫಿ ಮತ್ತೆ ತುತ್ತಾಗಿದ್ದಾರೆ.
View this post on Instagram
ದಿನದಿಂದ ದಿನಕ್ಕೆ ಮತ್ತಷ್ಟು ವಿಚಿತ್ರವಾಗಿ ಕಾಣಿಕೊಳ್ಳುತ್ತಾರೆ ಉರ್ಫಿ. ಈ ಬಾರಿ ಗೋಣಿ ಚೀಲದ ಬಟ್ಟೆ ತೊಟ್ಟಿದ್ದಾರೆ. ಹಾಗಂತ ಉರ್ಫಿ ಗೋಣಿಚೀಲದ ಮಾದರಿಯಲ್ಲಿರುವ ಬಟ್ಟೆಯನ್ನು ಧರಿಸಿಲ್ಲ. ಬದಲಿಗೆ ಗೋಣಿ ಚೀಲವನ್ನೇ ಹರಿದು ಕ್ರಾಪ್ ಟಾಪ್ ಮತ್ತು ಸ್ಕ್ರರ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಒಟ್ನಲ್ಲಿ ಉರ್ಫಿ ಗೋಣಿ ಚೀಲದ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.