ಮುಂಬೈ: ಬಾಲಿವುಡ್ ಅಂಗಳದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ ಯೂನಿಕ್ ಸ್ಟೈಲ್ ಮೂಲಕವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತೊಟ್ಟಿರುವ ಉಡುಗೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಉರ್ಫಿ ತೊಡುವ ಬಟ್ಟೆಯೆ ಹಾಗೆ, ಸುದ್ದಿ ಮಾಡುವಂತಿರುವುದರ ಜೊತೆಗೆ ನೆಟ್ಟಿಗರ ಕಣ್ಣಿಗೆ ಕುಕ್ಕುವಂತಿರುತ್ತವೆ. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೊಣೆ ಅವರಿಗೆ ಕಾಂಪಿಟ್ ಮಾಡುವ ಮಟ್ಟಿಗೆ ಡ್ರೆಸ್ನ್ನು ವಿಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಹಲವಾರು ಪ್ರಸಿದ್ಧ ಉಡುಪುಗಳನ್ನು ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್ಗೆ ಆಲಿಯಾ ಬೌಲ್ಡ್
View this post on Instagram
ಉರ್ಫಿ ದೇಹದ ಅರ್ಧ ಭಾಗಕ್ಕೆ ಮಾತ್ರ ಬಟ್ಟೆಯನ್ನು ತೊಟ್ಟು ನ್ಯೂ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚರ್ಮದ ಕಲರ್ಗೆ ಹೊಂದುವ ಬಣ್ಣದ ಬಟ್ಟೆಯನ್ನು ತೊಟ್ಟಿದ್ದಾರೆ. ನೋಡುಗರಿಗೆ ಒಂದು ಕ್ಷಣ ಉರ್ಫಿ ಮೈ ಮೇಲೆ ಬಟ್ಟೆ ಇದ್ಯಾ ಇಲ್ಲವಾ ಎನ್ನುವ ಅನುಮಾನ ಹುಟ್ಟಿಸುತ್ತದೆ. ಡ್ರೆಸ್ಗೆ ಹೊಂದಿಕೆಯಾಗುವ ಹೀಲ್ಸ್, ಕಿವಿಯೋಲೆ, ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ನೆಟ್ಟಿಗರಿಗೆ ಉರ್ಫಿ ಡ್ರೆಸ್ ಸ್ಟೈಲ್ ನೋಡಿ ಕಂಗಾಲಾಗಿದ್ದಾರೆ. ಉರ್ಫಿ ಸ್ಟೈಲ್ಗೆ ಅಂತ್ಯ ಅನ್ನೋದೆ ಇಲ್ವಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂಡೋ-ಕೆನಡಿಯನ್ ಗಾಯಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಉರ್ಫಿ ಜಾವೇದ್!
ಉರ್ಫಿ ಇಂಡೋ-ಕೆನಡಾದ ಗಾಯಕ ಕುನ್ವಾರ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಊಹಾಪೋಹ ಸುದ್ದಿ ಹರಿದಾಡುತ್ತಿದೆ. ಗಾಯಕ ಕುನ್ವಾರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ ಬಟ್ಟೆಗಳನ್ನು ವಿನ್ಯಾಸಕಾರರು ಡಿಸೈನ್ ಮಾಡುತ್ತಾರೆ. ಉರ್ಫಿ ಉಡುಪಿನ ಮೂಲಕವಾಗಿಯೆ ಸುದ್ದಿಯಲ್ಲಿರುತ್ತಾರೆ.