ಬಾಲಿವುಡ್ (Bollywood) ಬ್ಯೂಟಿ ಉರ್ಫಿ ಜಾವೇದ್ (Urfi Javed) ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹಾಗಾಗಿ ಬರ್ತ್‌ಡೇ ಪ್ರೀ- ಸೆಲೆಬ್ರೆಷನ್ ಆರಂಭಿಸಿದ್ದಾರೆ. ಇದೀಗ ಡಿಫರೆಂಟ್ ಲುಕ್‌ನಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನಟಿಯ ಬೋಲ್ಡ್ ಇದೀಗ ಸಖತ್ ವೈರಲ್ ಆಗುವುದರ ಜೊತೆಗೆ ಟ್ರೋಲ್ ಆಗುತ್ತಿದೆ.
ಸೀರಿಯಲ್ ಮತ್ತು ಬಿಗ್ ಬಾಸ್ ಶೋ(Bigg Boss Show) ಮೂಲಕ ಗಮನ ಸೆಳೆದ ನಟಿ ಉರ್ಫಿ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ. ಇದೀಗ ತುಂಡು ಬಟ್ಟೆ ಧರಿಸಿ ಬಂದ ನಟಿಯ ಪಾಡು ನೋಡಿ ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ. (ಅ.15) ಉರ್ಫಿ ಬರ್ತ್‌ಡೇ ಇರುವ ಕಾರಣ ಒಂದು ದಿನ ಮುಂಚಿತವಾಗಿಯೇ ಪಾರ್ಟಿ ಶುರುವಾಗಿದೆ. ಮೈ ಕಾಣುವಂತ ಡ್ರೆಸ್ ಧರಿಸಿ, ನಡೆಯೋಕು ಆಗದೇ ನಟಿ ಕಷ್ಟಪಟ್ಟಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮೈ ಕಾಣುವಂತೆ ಪಿಂಕ್ ಕಲರ್ ಡ್ರೆಸ್ ಧರಿಸಿರುವ ಉರ್ಫಿ ಕಾರಿನಿಂದ ಇಳಿಯುತ್ತಾರೆ. ನಡೆಯೋಕು ಆಗದೇ ಹೆಜ್ಜೆ ಇಡೋಕೆ ಕಷ್ಟ ಪಡುತ್ತಿದ್ದ ನಟಿಗೆ ಮಹಿಳೆಯೊಬ್ಬರು ಸಹಯ ಮಾಡುತ್ತಾರೆ. ಒಂದು ಹೆಜ್ಜೆ ಮುಂದೆ ಇಡೋಕು ಕಷ್ಟಪಡುತ್ತಿದ್ದ ನಟಿಯನ್ನ ನೋಡಿ ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ
View this post on Instagram
ಉರ್ಫಿಯ ವಿಚಿತ್ರ ವೇಶಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಮೈ ಕಾಣುವಂತ ಡ್ರೆಸ್ ಹಾಕುವ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.