ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಫೇಮಸ್. ಪ್ರತಿದಿನ ಉರ್ಫಿ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ತುಂಡುಡುಗೆ ಬದಿಗಿಟ್ಟು ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.
Advertisement
ಪ್ರತಿನಿತ್ಯ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸೆಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ನಾನಾ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಉರ್ಫಿ ಯಾವಾಗಲು ಬೋಲ್ಡ್ ಬಟ್ಟೆ ಧರಿಸುತ್ತಿದ್ದರು. ಇದೀಗ ಸೀರೆಯಲ್ಲಿ ಮಿಂಚಿದ್ದಾರೆ. ವಿಚಿತ್ರವಾಗಿ ಸೀರೆ ಉಟ್ಟಿರುವ ಉರ್ಫಿ ನೋಡಿ ಹೀಗೂ ಸೀರೆ ಉಡಬಹುದಾ ಎಂದು ಎನ್ನುತ್ತಿದ್ದಾರೆ. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್
Advertisement
View this post on Instagram
ಉರ್ಫಿ ಸದ್ಯ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದಾರೆ. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್ಗಳು ಹರಿದು ಬರುತ್ತಿವೆ.