ಹೇಟರ್ಸ್‌ಗಳನ್ನೇ ಫಾನ್ಸ್ ಮಾಡ್ಕೊಂಡಿರೋ ಬೆಡಗಿ ಬಾಲಿವುಡ್ ಬಿಂದಾಸ್ ಮಾಡೆಲ್ ಉರ್ಫಿ ಜಾವೇದ್ (Urfi Javed). ಈಕೆಯ ಬಟ್ಟೆ ಸ್ಟೈಲ್ ನೋಡಿ ಮೊದಮೊದಲು ಅಸಹ್ಯ ಅನ್ನಿಸಿ ಬೈದವರೇ ಹೆಚ್ಚು.
View this post on Instagram
ಬಳಿಕ ಉರ್ಫಿಯ ಈ ವಿಚಿತ್ರ ಯೋಚನೆಯೇ ಜನರಿಗೆ ಇಷ್ಟವಾಗುತ್ತಿದೆ. ಪರಿಣಾಮ ಉರ್ಫಿ ಮಾಡುವ ಪ್ರತಿ ಪೋಸ್ಟ್‌ಗೂ ಲಕ್ಷಾಂತರ ವೀವ್ಸ್ ಲೈಕ್ಸ್ ಬರ್ತಿದೆ. ಟ್ರೆಂಡ್ ಕೂಡ ಕ್ರಿಯೆಟ್ ಆಗ್ತಿದೆ. ಇದನ್ನೂ ಓದಿ: ‘ಹೂವಿನ ಬಾಣದಂತೆ..’ ವೈರಲ್ ಹುಡುಗಿ ನಿತ್ಯಶ್ರೀ ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?
ಉರ್ಫಿಯ ಕಾಸ್ಟ್ಯೂಮ್ ಡಿಸೈನ್‌ಗೆ ಬೇರೆ ಹೋಲಿಕೆಯೇ ಇರೋದಿಲ್ಲ. ಇದೀಗ ಉರ್ಫಿ ಹೊಸ ವಿನ್ಯಾಸದ ಕಾಸ್ಟ್ಯೂಮ್ (Costume Design) ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್
ಇನ್‌ವಾಯ್ಸ್ ಪ್ರಿಂಟಿಗ್ ಮಷಿನ್ ಸ್ಟೈಲ್ ಕಾಸ್ಟ್ಯೂಮನ್ನ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಉರ್ಫಿ ಸುಮ್ನೆ ಡ್ರೆಸ್ ಮುಟ್ಟಿದ್ರೆ ಸಾಕು ರಾಶಿ ರಾಶಿ ಇನ್‌ವಾಯ್ಸ್ ಬಿಲ್ ಬರುತ್ತೆ. ಹೀಗೂ ಒಂದು ಸ್ಟೈಲ್ ಮಾಡಬಹುದಾ ಅನ್ನೋರು ಉರ್ಫಿ ನೋಡಿ ಕಲೀಬೇಕು. ಇನ್ನೂ ಉರ್ಫಿ ಉಡುಪಿಗೆ ಕೆಲವರು ಟ್ರೋಲ್ ಮಾಡಿದ್ರೆ ಇನ್ನೂ ಕೆಲವರು ಪರ ವಿರುದ್ಧ ಕಾಮೆಂಟ್ ಮಾಡಿದ್ದಾರೆ, ನನಗೊಂದು ಇನ್‌ವಾಯ್ಸ್ ಪ್ರಿಂಟ್ ಕೊಡ್ತೀರಾ ಅಂತಲೂ ಕೇಳಿದ್ದಾರೆ. ಇದನ್ನೂ ಓದಿ: ಸ್ಕೂಬಾ ಡೈವಿಂಗ್ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು