ಚಿತ್ರವಿಚಿತ್ರ ಕಾಸ್ಟ್ಯೂಮ್ಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್ (Urfi Javed) ಅವರಿಗೆ ಬಾಡಿಗೆಗೆ ಮನೆ ಬೇಕಾಗಿದೆಯಂತೆ. ಬಾಡಿಗೆ (Rent) ಮನೆ (House) ಹುಡುಕುವುದಕ್ಕಾಗಿಯೇ ಅವರು ಹಲವು ದಿನಗಳಿಂದ ಬೀದಿ ಬೀದಿ ಅಲೆಯುತ್ತಿದ್ದಾರಂತೆ. ಮನೆ ಖಾಲಿ ಇದ್ದರೂ, ತಮಗೆ ಮಾತ್ರ ಮನೆ ಕೊಡುವುದಿಲ್ಲ ಎಂದು ಉರ್ಫಿ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ.
Advertisement
ತಾವು ಅರೆಬರೆ ಬಟ್ಟೆಗಳನ್ನು ಹಾಕುವ ಕಾರಣಕ್ಕಾಗಿ ತಮ್ಮದೇ ಧರ್ಮದವರು ಮನೆ ಬಾಡಿಗೆ ಕೊಡುತ್ತಿಲ್ಲವಂತೆ. ತಾನು ಬೇರೆ ಧರ್ಮದವರು ಆಗಿರುವ ಕಾರಣಕ್ಕಾಗಿ ಇನ್ನುಳಿದ ಧರ್ಮದವರು ಮನೆ ನೀಡುತ್ತಿಲ್ಲವಂತೆ. ಹೀಗಾದರೆ, ನಾನು ವಾಸಿಸುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಾನೊಬ್ಬ ಕಲಾವಿದೆ ಎನ್ನುವುದನ್ನು ಮರೆತು, ನಾನು ಹಾಕುವ ಬಟ್ಟೆ ಮತ್ತು ನನ್ನ ಧರ್ಮದ ಆಧಾರದಿಂದ ನನ್ನನ್ನು ಅಳೆಯಲಾಗುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ
Advertisement
Advertisement
ಮುಂಬೈ (Mumbai) ನಗರದಲ್ಲಿ ಅವರಿಗೆ ಯಾರೂ ಮನೆ ಕೊಡುತ್ತಿಲ್ಲವಂತೆ. ಮನೆ ಹುಡುಕಾಟದಲ್ಲೇ ಅವರು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರಂತೆ. ಮನೆ ಹುಡುಕುವುದರಲ್ಲೇ ಸಮಯ ವ್ಯರ್ಥವಾಗುತ್ತಿರುವುದರಿಂದ ಕಾಸ್ಟ್ಯೂಮ್ ಬಗ್ಗೆ ಯೋಚಿಸುವುದಕ್ಕೆ ಅವರಿಗೆ ಸಮಯವೇ ಸಿಗುತ್ತಿಲ್ಲ ಎಂದಿದ್ದಾರೆ ಉರ್ಫಿ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ನಟನೆಗಿಂತಲೂ ಹೆಚ್ಚು ಫೇಮಸ್ ಆಗಿದ್ದು ಅರೆಬರೆಯ ಬಟ್ಟೆಗಳನ್ನು ತೊಡುವ ಮೂಲಕ. ಇದೇ ಅವರಿಗೆ ಈಗ ಮುಳುವಾಗಿದೆಯಂತೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k