ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ತಮ್ಮ ಡ್ರೆಸ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ವಿಚಿತ್ರ ಫ್ಯಾಷನ್ಗೆ ಮತ್ತೊಂದು ಹೆಸರೇ ಉರ್ಫಿ ಜಾವೇದ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಬಾರಿ ಸ್ವೀಟ್ ಮೇಲೆ ಹಾಕುವ ಸಿಲ್ವರ್ ಲೇಯರ್ ಲುಕ್ನಿಂದ ಉರ್ಫಿ ವೈರಲ್ ಆಗುತ್ತಿದ್ದಾರೆ.
View this post on Instagram
Advertisement
ಭಿನ್ನ ವಿಭಿನ್ನ ಡ್ರೆಸ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡಿರುವ ಬಿಗ್ ಬಾಸ್ನ ಮಾಜಿ ಸ್ಪರ್ಧಿ ಉರ್ಫಿ ಇದೀಗ ಹೊಸ ಲುಕ್ನಿಂದ ಸಂಚಲನ ಮೂಡಿಸುತ್ತಿದ್ದಾರೆ. ಗೋಣಿ ಚೀಲ, ನೋಟು, ಪೇಪರ್, ಹೂವಿನ ಡ್ರೆಸ್ ಹೀಗೆ ನಾನಾ ಬಗೆಯ ಅವತಾರದ ಮೂಲಕ ಈಗಾಗಲೇ ಉರ್ಫಿ ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು
Advertisement
View this post on Instagram
Advertisement
ಈ ಬಾರಿ ಇನ್ನು ವಿಭಿನ್ನ ಲುಕ್ನಲ್ಲಿ ಅಭಿಮಾನಿಗಳ ಮುಂದೆ ಸ್ವೀಟ್ ಮೇಲೆ ಹಾಕುವ ಸಿಲ್ವರ್ ಲೇಯರ್ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.