ಬಾಲಿವುಡ್ ಓಟಿಟಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಉರ್ಫಿ ಜಾವೇದ್ ಭಿನ್ನವಾದ ಬೋಲ್ಡ್ ಉಡುಪುಗಳನ್ನು ತೊಟ್ಟು ಬಿ’ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿರುತ್ತಾರೆ. ದಿನಕ್ಕೊಂದು ಭಿನ್ನ ಡ್ರೆಸ್ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಕ್ರೇಜ್ ಮೂಡಿಸಿದ್ದಾರೆ. ಬಾಲಿವುಡ್ ಕ್ಯಾಮರಾಗಳು ಉರ್ಫಿ ಇಂದು ಯಾವ ರೀತಿಯ ಬಟ್ಟೆ ತೊಡುತ್ತಾರೆ ಎಂದು ಕಾಯುತ್ತ ಇರುತ್ತಾರೆ. ಈ ನಡುವೆ ಭಾರತದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್-2 ಸಿನಿಮಾ ಬಗ್ಗೆ ಕ್ಯಾಮರಾ ಮ್ಯಾನ್ ಪ್ರಶ್ನೆ ಕೇಳಿದ್ದಾರೆ. ಈ ನಟಿ ಉತ್ತರ ಕೇಳಿ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಉರ್ಫಿ ವಿರುದ್ಧ ಗರಂ ಆಗಿದ್ದಾರೆ.
ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್-2 ಇಡೀ ಇಂಡಿಯಾದ ಕಣ್ಣನ್ನು ತನ್ನತ್ತ ಸೆಳೆದಿದೆ. ಈ ಹಿನ್ನೆಲೆ ಉರ್ಫಿಯನ್ನು ಮುಂಬೈ ಪಾಪರಾಜಿಗಳು ಕೆಜಿಎಫ್-2 ಸಿನಿಮಾ ಟ್ರೇಲರ್ ನೋಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಉರ್ಫಿ, ಇಲ್ಲ ನಾನು ನೋಡಿಲ್ಲ. ನಾನು ಕೆಜಿಎಫ್ ಚಾಪ್ಟರ್ ಒಂದನ್ನೇ ಇನ್ನೂ ನೋಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ
View this post on Instagram
ಆದರೆ ಈ ಬಗ್ಗೆ ನನಗೆ ಬೇಸರವಿದೆ. ಅದಕ್ಕೆ ಈ ಸಿನಿಮಾವನ್ನು ಒಟ್ಟಿಗೆ ನೋಡುವ ಯೋಜನೆಯಿದೆ. ಎರಡೂ ಭಾಗವನ್ನು ನೋಡುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ ದಕ್ಷಿಣ ಸಿನಿಮಾವನ್ನು ನೀವು ನೋಡುವುದಿಲ್ವ ಎಂದು ಕೇಳಿದಾಗ, ಇಲ್ಲ. ನಾನು ನೋಡುತ್ತೇನೆ. ಸೌತ್ ಸಿನಿಮಾದಲ್ಲಿಯೂ ಒಳ್ಳೆ ಸಿನಿಮಾಗಳಿವೆ. ಅಲ್ಲಿಯೂ ಹೆಚ್ಚು ಹ್ಯಾಂಡ್‍ಸಮ್ ನಾಯಕರಿದ್ದಾರೆ ಎಂದು ಉತ್ತರಿದ್ದಾರೆ. ದಕ್ಷಿಣದ ನೆಚ್ಚಿನ ನಟರ್ಯಾರು ಎಂದು ಕೇಳಿದ್ದಕ್ಕೆ, ಆಕೆ, ರಾಮ್‍ಚರಣ್ ನನಗೆ ತುಂಬಾ ಇಷ್ಟ. ಅವರು ತುಂಬಾ ಹ್ಯಾಂಡ್‍ಸಮ್ ಆಗಿದ್ದಾರೆ ಎಂದು ಉತ್ತರಿಸಿದ್ದಾರೆ.
ತಮ್ಮ ಡ್ರೆಸ್‍ಗೆ ಸಂಬಂಧಿಸಿದಂತೆ ಹೆಚ್ಚು ಟ್ರೋಲ್‍ಗೆ ಗುರಿಯಾಗುವ ಈ ನಟಿ ಯಾವುದಕ್ಕೂ ಕೇರ್ ಮಾಡುವುದಿಲ್ಲ. ಓಟಿಟಿ ಶೋ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಈ ನಟಿ ಹಾಟ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. ಅವರ ವೀಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್