ಸಿನಿಮಾ, ಟಿವಿ ಕಾರ್ಯಕ್ರಮಗಳಿಗಿಂತಲೂ ಬಾಲಿವುಡ್ ನಟಿ ಉರ್ಫಿ ಜಾವೇದ್ ಧರಿಸುವ ಬಟ್ಟೆಗಳೇ ಬಿಟೌನ್‍ನಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ದಿನಕ್ಕೊಂದು ವೇಷ ಧರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಉರ್ಫಿ ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರ ಧರಿಸಿರುವ ಕಾಸ್ಟ್ಯೂಮ್ ನೋಡುಗರ ಕಣ್ಣು ಕೆಂಪಗಾಗಿಸಿದೆ. ಈ ಅವತಾರಕ್ಕೆ ತುಂಬಾ ಜನ ಉರ್ಫಿ ಬೆಂಡೆತ್ತಿದ್ದಾರೆ.
Advertisement
ಉರ್ಫಿ ಜಾವೇದ್ ಕಾಸ್ಟ್ಯೂಮ್ ಗಳೇ ವಿಚಿತ್ರವಾಗಿರುತ್ತವೆ. ಮತ್ತು ಅವುಗಳಿಗೆ ಬಳಸುವ ಮಟಿರೀಯಲ್ಸ್ ಕೂಡ ಅಚ್ಚರಿ ಮೂಡಿಸುವಂತಿರುತ್ತವೆ. ಅವುಗಳಿಂದಲೇ ಕಾಸ್ಟ್ಯೂಮ್ ಡಿಸೈನ್ ಮಾಡಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾರೆ ನಟಿ. ಸೊಳ್ಳೆ ನೆಟ್, ಪ್ಲಾಸ್ಟಿಕ್, ಹೂವುಗಳು ಹೀಗೆ ಸಿಕ್ಕ ಸಿಕ್ಕ ವಸ್ತುಗಳಲ್ಲೇ ಅವರು ಬಟ್ಟೆಯನ್ನು ಕಾಣುತ್ತಾರೆ. ಅವುಗಳಿಂದಲೇ ದೇಹವನ್ನು ಸಿಂಗರಿಸುತ್ತಾರೆ. ಈ ಕಾರಣಕ್ಕಾಗಿ ಹೆಚ್ಚು ಟ್ರೋಲ್‍ಗೆ ಒಳಗಾಗುತ್ತಾರೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ
Advertisement
Advertisement
ಈವರೆಗೂ ಕೇವಲ ಉರ್ಫಿ ಅವರ ಕಾಸ್ಟ್ಯೂಮ್ ಬಗ್ಗೆ ತಲೆಕೆಡಿಸಿಕೊಂಡಿದ್ದ ಅಭಿಮಾನಿಗಳು, ಇದೀಗ ಅವರ ಕಾಸ್ಟ್ಯೂಮ್ ಡಿಸೈನರ್ ಯಾರು ಎಂದು ಹುಡುಕುತ್ತಿದ್ದಾರೆ. ಹಲವರು ಕಾಸ್ಟ್ಯೂಮ್ ಡಿಸೈನ್ ಮಾಡುವವರನ್ನು ಪರಿಚಯಿಸಿ ಎಂದೂ ಕೇಳಿದ್ದಾರೆ. ಆದರೆ, ಈ ಕುರಿತು ಉರ್ಫಿ ಯಾವುದೇ ಕಾರಣಕ್ಕೂ ಉತ್ತರ ಕೊಟ್ಟಿಲ್ಲ. ಮತ್ತು ಕಾಸ್ಟ್ಯೂಮರ್ ಯಾರು ಅಂತಾನೂ ಹೇಳಿಲ್ಲ.