ಪಠಾಣ್ ಸಿನಿಮಾದ ‘ಬೇಷರಂ ರಂಗ್’ (Besharam Rang) ಗೀತೆಯ ವಿವಾದ (controversy) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದರೂ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಕೊಂಚವೂ ಭಯಗೊಂಡಂತೆ ಕಾಣುತ್ತಿಲ್ಲ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ (saffron) ಬಿಕಿನಿ (bikini) ತೊಟ್ಟು ಬಣ್ಣಕ್ಕೆ ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಸೆನ್ಸಾರ್ ಮಂಡಳಿ ಕೂಡ ಅಶ್ಲೀಲ ಎನ್ನುವಂತಹ ಚಿತ್ರಿಕೆಗಳನ್ನು ಕಟ್ ಮಾಡಿಸಿದೆ. ಈ ನಡುವೆಯೂ ಉರ್ಫಿ ಜಾವೇದ್ ಹುಚ್ಚಾಟ ಮರೆದಿದ್ದಾರೆ.
Advertisement
ಯಾವ ಬಣ್ಣ ಮತ್ತು ಹಾಡಿನಿಂದ ಪಠಾಣ್ ಸಿನಿಮಾ ವಿವಾದಕ್ಕೀಡಾಗಿತ್ತೋ, ಅದೇ ಬಣ್ಣದ ತುಂಡುಡುಗೆ ತೊಟ್ಟು, ಅದೇ ಹಾಡಿಗೆ ಕ್ಯಾಟ್ ವಾಕ್ ಮಾಡಿದ್ದಾರೆ ಉರ್ಫಿ. ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೆಲವರು ಎಚ್ಚರಿಕೆಯ ಸಂದೇಶಗಳನ್ನೂ ಕಳುಹಿಸಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಕಾನೂನು ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?
Advertisement
Advertisement
ಉರ್ಫಿ ಹಾಕುವ ಕಾಸ್ಟ್ಯೂಮ್ ವಿವಾದ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈಗಾಗಲೇ ಅವರ ವಿರುದ್ಧ ಅನೇಕ ದೂರುಗಳು ಸಲ್ಲಿಕೆಯಾಗಿವೆ. ಮೊನ್ನೆಯಷ್ಟೇ ದುಬೈನಲ್ಲಿ ಪೊಲೀಸರು ಉರ್ಫಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ, ಬಿಜೆಪಿಯ ಮಹಿಳಾ ಸದಸ್ಯರೊಬ್ಬರು ಉರ್ಫಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದಾರೆ. ಇಷ್ಟೊಂದು ಘಟನೆಗಳಾದರೂ, ಉರ್ಫಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಏನು ಮಾಡಬೇಕೋ ಅದನ್ನು ಮಾಡುತ್ತಲೇ ಇದ್ದಾರೆ.
Advertisement
ನಿನ್ನೆಯಷ್ಟೇ ಪಠಾಣ್ ಸಿನಿಮಾಗೆ ಸೆನ್ಸಾರ್ ಮಂಡಳಿಯು ಕೊನೆಗೂ ಪ್ರಮಾಣ ಪತ್ರವನ್ನು ಕೊಟ್ಟಿದ್ದು, ಕೆಲವು ಚಿತ್ರಿಕೆಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ದೀಪಿಕಾ ಪಡುಕೋಣೆಯು ಕುಣಿದ ‘ಬೇಷರಂ ರಂಗ್’ ಹಾಡಿನ ಅಶ್ಲೀಲ ಭಂಗಿಗಳನ್ನು ತಗೆದು ಹಾಕುವಂತೆ ಸೂಚಿಸಿದೆ. ಈ ಹಾಡಿನಲ್ಲಿ ಅಶ್ಲೀಲವಾಗಿ, ಒಳ ಉಡುಪುಗಳು ಕಾಣುವಂತೆ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡುವಂತಹ ಎಲ್ಲ ಸಂಗತಿಗಳನ್ನೂ ಕಟ್ ಮಾಡಿಸಿದೆ. ಇಷ್ಟೆಲ್ಲ ಮುಗಿದ ನಂತರವೇ ಈ ಚಿತ್ರಕ್ಕೆ ಯು/ ಎ ಸರ್ಟಿಫಿಕೇಟ್ ಪ್ರಮಾಣಪತ್ರವನ್ನು ನೀಡಿದೆ.
ಅಲ್ಲದೇ, ಸಿನಿಮಾದ ಡೈಲಾಗ್ ಮೇಲೂ ಸೆನ್ಸಾರ್ ಮಂಡಳಿಯು ಅಧಿಕಾರ ಚಲಾಯಿಸಿದ್ದು, ಕೆಲವು ಪದಗಳನ್ನು ಮಾರ್ಪಾಡು ಮಾಡುವಂತೆ ಸೂಚಿಸಿದೆ. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದಂತೆ. ‘ಲಂಗ್ಡೆ ಲುಲ್ಲೆ’ ಪದದ ಬದಲು ‘ಟೂಟೆ ಪೂಟೆ’ ಎಂದು ಬದಲಾಯಿಸಲು, 13 ಕಡೆ ‘ಪಿಎಂಓ’ ಪದವನ್ನು ತಗೆದು ಹಾಕುವಂತೆ ಸೂಚಿಸಿದೆ. ‘ಮಿಸಸ್ ಭಾರತ್ ಮಾತಾ’ ಎನ್ನುವ ಮಾತಿನ ಬದಲಾಗಿ ‘ಹಮಾರಿ ಭಾರತ್ ಮಾತಾ’ ಎಂದು ಡಬ್ ಮಾಡುವಂತೆ ಸೂಚಿಸಿದೆ. ಹೀಗೆ ಸಾಕಷ್ಟು ಪದಗಳನ್ನು ಬದಲಿಸಿ, ಬೇರೆ ಪದವನ್ನು ಬಳಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಿತ್ತು ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k