ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ನಿನ್ನೆಯೊಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ‘ನನ್ನ ಬಟ್ಟೆ ಕಾರಣದಿಂದಾಗಿ ನಿಮಗೆಲ್ಲ ನೋವಾಗಿದ್ದರೆ ಕ್ಷಮಿಸಿ. ಇನ್ಮುಂದೆ ಆ ರೀತಿಯ ಬಟ್ಟೆಗಳನ್ನು ಹಾಕುವುದಿಲ್ಲ. ನೀವು ಬದಲಾದ ಉರ್ಫಿ ನೋಡುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು.
ಅರೆಬರೆ ಬಟ್ಟೆ (Costume) ಹಾಕುವ ಕಾರಣಕ್ಕಾಗಿ ಈಗಾಗಲೇ ಉರ್ಫಿ ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿದ್ದಾರೆ. ಹಲವರು ಈಕೆಯ ಮೇಲೆ ದೂರು ಕೂಡ ನೀಡಿದ್ದಾರೆ. ಏನೇ ಮಾಡಿದರೂ ಉರ್ಫಿ ಮಾತ್ರ ತುಂಡುಡುಗೆ ತೊಡುವುದನ್ನು ಬಿಟ್ಟಿರಲಿಲ್ಲ. ಏಕಾಏಕಿ ಆಕೆ ಈ ಟ್ವೀಟ್ ಮಾಡಲು ಕಾರಣವೇನು ಎನ್ನುವ ಚರ್ಚೆ ನಡೆದಿತ್ತು.
ಪೊಲೀಸ್ ಇಲಾಖೆಯು ಉರ್ಫಿಗೆ ನೋಟಿಸ್ ನೀಡಿರಬಹುದು. ಅಥವಾ ಬೆದರಿಕೆ ಬಂದಿರಬಹುದು. ಈ ಕಾರಣಕ್ಕಾಗಿ ಮೈ ತುಂಬಾ ಬಟ್ಟೆ ತೊಡುವ ಮಾತುಗಳನ್ನು ಉರ್ಫಿ ಆಡಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದರು. ಈಗಲಾದರೂ ಬುದ್ಧಿ ಬಂತಲ್ಲ, ಒಳ್ಳೆಯದಾಗಲಿ ಎಂದು ಹಲವರು ಕಾಲೆಳೆದಿದ್ದರು. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ
ಆದರೆ, ಇವತ್ತು ಉರ್ಫಿ ಮತ್ತೊಂದು ಶಾಕ್ ನೀಡಿದ್ದಾರೆ. ಮತ್ತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ನಾನು ನಿಮಗೆ ಏಪ್ರಿಲ್ ಫೂಲ್ (April Fool) ಮಾಡಿದೆ. ಉರ್ಫಿ ಬದಲಾಗಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ನಿನ್ನೆ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಬರೆದುಕೊಂಡಿದ್ದಾಳೆ.