BollywoodCinemaDistrictsKarnatakaLatestMain PostSandalwoodTV Shows

ಬಾಂಬೆ ಮಿಠಾಯಿಯನ್ನೇ ಡ್ರೆಸ್‌ ಮಾಡ್ಕೊಂಡ ಉರ್ಫಿ ವೀಡಿಯೋ ವೈರಲ್

ಬಾಲಿವುಡ್ ನಟಿ, ಕಿರುತೆರೆ ಕಲಾವಿದೆ ಉರ್ಫಿ ಜಾವೇದ್ ಬಿಟೌನ್ ನ ಸದ್ಯದ ವಿವಾದಿತ ತಾರೆ. ಮೊನ್ನೆಯಷ್ಟೇ ಅರೆಬರೆ ಬಟ್ಟೆ ಹಾಕಿಕೊಂಡು ಚಾನೆಲ್ ವೊಂದರ ಸಿಬ್ಬಂದಿ ಜತೆ ಗಲಾಟೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ಸೆಕ್ಯೂರಿಟಿ ಗಾಡ್ ಜತೆಯೂ ಅವರು ಜಗಳವಾಡಿಕೊಂಡಿದ್ದ ವಿಡಿಯೋ ಕೂಡ ಸಖತ್ ಸದ್ದು ಮಾಡಿತ್ತು. ಇದೀಗ ಉರ್ಫಿ ಇನ್ಸ್ಟಾದಲ್ಲಿ ಮತ್ತೊಂದು ವಿಡಿಯೋ ಹಾಕಿಕೊಂಡಿದ್ದಾರೆ. ಆ ಕಾಸ್ಟ್ಯೂಮ್ ಕಂಡು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

ಸಾಮಾನ್ಯವಾಗಿ ಬಟ್ಟೆಗಳಿಂದಲೇ ಕಾಸ್ಟ್ಯೂಮ್ ರೆಡಿ ಮಾಡಲಾಗುತ್ತದೆ. ಆದರೆ, ಉರ್ಫಿ ಕಾಸ್ಟ್ಯೂಮ್ ತಯಾರಿ ಆಗಿದ್ದು ಬಾಂಬೆ ಮಿಠಾಯಿಯಿಂದ. ಈ ಬಾರಿ ಅವರು ಬಾಂಬೆ ಮಿಠಾಯಿಯನ್ನೇ ದೇಹಕ್ಕೆ ಕಾಸ್ಟ್ಯೂಮ್ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದೊಂದೇ ಪೀಸ್ ಅನ್ನು ಕಿತ್ತು ತಿನ್ನುತ್ತಾರೆ.

 

View this post on Instagram

 

A post shared by Urrfii (@urf7i)

ಈ ಹಿಂದೆ ಇದೇ ಉರ್ಫಿ ಹೆಣ್ಣುಮಕ್ಕಳು ಬಳಸುವ ಸೇಫ್ಟಿ ಪಿನ್ನಿನಿಂದ ಡಿಸೈನ್ ಮಾಡಿದ್ದ ಡ್ರೆಸ್ ಹಾಕಿಕೊಂಡಿದ್ದರು. ಈ ಡ್ರಸ್ ಗಾಗಿ ಅವರು ಸಾವಿರಾರು ಸೇಫ್ಟಿ ಪಿನ್ನುಗಳನ್ನು ಬಳಕೆ ಮಾಡಿದ್ದರು. ಆ ಪಿನ್ ಗಳು ಚುಚ್ಚದಂತೆ ಜಾಗೃತಿವಹಿಸಿದ್ದರು. ಈ ಬಾರಿ ಬಾಂಬೆ ಮಿಠಾಯಿಗೆ ಅವರು ಮೊರೆ ಹೋಗಿದ್ದಾರೆ. ಆ ಮಿಠಾಯಿಯನ್ನು ಮೈಗೆ ಮೆತ್ತಿಕೊಂಡು ಹಾಟ್ ಹಾಟ್ ಆಗಿ ಕಾಣುತ್ತಿದ್ದಾರೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

ಅರೆಬರೆ ಕಾಸ್ಟ್ಯೂಮ್ ಹಾಕಿದ ಫೋಟೋಗಳು ಮತ್ತು ಈ ರೀತಿಯ ತರ್ಲೆ ಕಾರಣಗಳಿಂದಾಗಿ ಉರ್ಫಿ ಸಖತ್ ಸುದ್ದಿ ಆಗುತ್ತಾರೆ. ನಟನೆಗಿಂತ ಇಂತಹ ಚಟುವಟಿಕೆಗಳಿಂದಲೇ ಉರ್ಫಿಯನ್ನು ಸುದ್ದಿಯಾಗುತ್ತಾರೆ. ಅಲ್ಲದೇ, ಫಿಲ್ಟರ್ ಇಲ್ಲದ ನಾಲಿಗೆಯಿಂದಾಗಿಯೂ ಅವರು ಸದ್ದು ಮಾಡುತ್ತಾರೆ.

Leave a Reply

Your email address will not be published.

Back to top button