ವಿಚಿತ್ರ ಕಾಸ್ಟ್ಯೂಮ್ ಧರಿಸುವ ಮೂಲಕವೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಇತ್ತೀಚೆಗಷ್ಟೇ ಅಮೃತ್ ಸರ್ (Amritsar) ನಲ್ಲಿರುವ ಗೋಲ್ಟನ್ ಟೆಂಪಲ್ ಗೆ ಭೇಟಿ ನೀಡಿದ್ದಾರೆ. ಟೆಂಪಲ್ ಗೆ ಹೋದಾಗ ತಾವು ಸಲ್ವಾರ್ ಕಮೀಜ್ ಧರಿಸಿರುವ ಕುರಿತು ಹೇಳಿಕೊಂಡಿದ್ದಾರೆ. ಸಂಪ್ರದಾಯಿಕ ಉಡುಗೆಯಲ್ಲಿ ಉರ್ಫಿ ಗೋಲ್ಡನ್ ಟೆಂಪಲ್ ಗೆ ಬಂದಿದ್ದ ಫೋಟೋ ಕೂಡ ವೈರಲ್ ಆಗಿದೆ.
Advertisement
ಸಾಮಾನ್ಯವಾಗಿ ಉರ್ಫಿ ಅರೆಬರೆ ಬಟ್ಟೆಗಳನ್ನೇ ಧರಿಸುತ್ತಾರೆ. ಸಿಕ್ಕ ವಸ್ತುಗಳಿಂದಲೇ ಮೈ ಮುಚ್ಚಿಕೊಳ್ಳುತ್ತಾರೆ. ತುಂಡುಡುಗೆಯಲ್ಲಿ ಕಾಣುವುದೇ ಹೆಚ್ಚು. ಮೊಬೈಲ್, ಕೀ ಬೋರ್ಡ್, ಬೆಂಕಿಪೊಟ್ಣ ಹೀಗೆ ನಾನಾ ವಸ್ತುಗಳಲ್ಲೇ ಡ್ರೆಸ್ ಮಾಡಿಕೊಂಡು ಅನೇಕರ ಕಂಗೆಣ್ಣಿಗೂ ಗುರಿಯಾಗಿದ್ದಾರೆ. ಇದೇ ಮೊದಲ ಬಾರಿಗ ಉರ್ಫಿಯನ್ನು ಸಾಂಪ್ರದಾಯಕ ಉಡುಗೆಯಲ್ಲಿ ಕಂಡ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
Advertisement
ಉರ್ಫಿ ವಿರೋಧಿ
Advertisement
ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಈ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು.
ಉರ್ಫಿ ಜಾವೇದ್ ಅವರು ಕೂರ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು.
ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದರು.