ಹಿಂದಿಯ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಹಾಟ್ ಮಾಡೆಲ್ ಉರ್ಫಿ ಜಾವೇದ್ (Urfi Javed) ಮತ್ತು ಮಾಜಿ ನೀಲಿತಾರೆ ಸನ್ನಿ ಲಿಯೋನ್ (Sunny Leone) ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಇಂಥದ್ದೊಂದು ಅವಕಾಶ ಕ್ಯಾಮೆರಾಗಳಿಗೆ ಸಿಗತ್ತಾ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಈಗ ಎಲ್ಲವೂ ಅಂದುಕೊಂಡಂತೆ ನಡೆದಿದೆ. ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್ ಒಂದೇ ಫ್ರೇಮ್ ನಲ್ಲಿ ಸೆರೆ ಸಿಗುವ ಮೂಲಕ ಬೇಸಿಗೆಯ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
Advertisement
ಮೊನ್ನೆಯಷ್ಟೇ ಬಾಲಿವುಡ್ ಖ್ಯಾತ ನಟ ಅರ್ಜುನ್ ಕಪೂರ್ ಜೊತೆ ಫೋಟೋ ತಗೆಸಿಕೊಂಡು ಕುಣಿದಿದ್ದ ಉರ್ಫಿ ಜಾವೇದ್ ಇವತ್ತು ಸನ್ನಿ ಲಿಯೋನ್ ಜೊತೆ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ (Mumbai) ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಥದ್ದೊಂದು ಗಳಿಗೆ ಇಬ್ಬರಿಗೂ ಕೂಡ ಬಂದಿದೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ನೆಟ್ಟಿಗರಿಂದ ಕಾಮೆಂಟ್ ಬಾಕ್ಸ್ ಭರ್ತಿಯಾಗಿದೆ. ಇದನ್ನೂ ಓದಿ: ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್ ಗಾಂಧಿ – ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಮಾತು
Advertisement
Advertisement
ಇದೇ ಸಂದರ್ಭದಲ್ಲಿ ಉರ್ಫಿ ತನ್ನ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಅತೀ ಶೀಘ್ರದಲ್ಲೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ. ಯಾವಾಗ ಮದುವೆ ಎಂದು ಕೇಳಿದ ಪ್ರಶ್ನೆಗೆ ‘ಅವನು ಯಾವಾಗ ಮದುವೆ ಆಗುತ್ತಾನೋ ಆವಾಗ. ಈಗಾಗಲೇ ಅವನಿಗೆ ಎರಡು ಮದುವೆ ಆಗಿದೆ. ಈಗಾಗಲೇ ಡಿವೋರ್ಸ್ ಕೂಡ ಮಾಡಿಕೊಂಡಿದ್ದಾನೆ. ಮೂರನೇ ಡಿವೋರ್ಸ್ ಕೂಡ ಆಗಲಿ. ಆಮೇಲೆ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.
Advertisement
ಉರ್ಫಿ ಜಾವೇದ್ ಇತ್ತೀಚೆಗೆ ವಿವಿಧ ವಿನ್ಯಾಸ ಕಾಸ್ಟ್ಯೂಮ್ ಹಾಕಿಕೊಂಡು ಬೀದಿಗಿಳಿಯುತ್ತಾರೆ. ಸನ್ನಿ ಲಿಯೋನ್ ಜೊತೆ ಫೋಟೋಗೆ ಪೋಸ್ ಕೊಟ್ಟಾಗಲೂ ಮತ್ತೊಂದು ವಿಭಿನ್ನ ರೀತಿಯ ಡಿಸೈನರ್ ಬಟ್ಟೆ ಹಾಕಿಕೊಂಡಿದ್ದರು. ಒಂದು ರೀತಿಯಲ್ಲಿ ಅದು ಎದೆಗವಚ ರೀತಿಯಲ್ಲಿ ವಿನ್ಯಾಸ ಮಾಡಿರುವ ಬಟ್ಟೆಯಾಗಿತ್ತು. ಆ ಕಾಸ್ಟ್ಯೂಮ್ ಗೂ ಕೂಡ ಸಾಕಷ್ಟು ಕಾಮೆಂಟ್ ಗಳು ಹರಿದು ಬಂದಿವೆ.