ಲಕ್ನೋ: ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಉರ್ದು ಪ್ರಾರ್ಥನೆಯನ್ನು (Urdu Prayer) ಹಾಡಿಸಿದ್ದಕ್ಕೆ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು (Principal) ಅಮಾನತುಗೊಳಿಸಿರುವ (Suspend) ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ನಡೆದಿದೆ.
ವರದಿಗಳ ಪ್ರಕಾರ ಶಾಲಾ ಮಕ್ಕಳಿಗೆ ಬೆಳಗ್ಗೆ ಪ್ರಾರ್ಥನೆ ವೇಳೆ ಜನಪ್ರಿಯ ಉರ್ದು ಭಾಷೆಯ ಗೀತೆ ‘ಲಬ್ ಪೆ ಆತಿ ಹೆ ದುವಾ ಬನ್‌ಕೆ ತಮನ್ನಾ ಮೇರಿ’ ಹಾಡನ್ನು ಹಾಡಿಸಲಾಗಿದೆ. ಇದರ ವೀಡಿಯೋ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಉರ್ದು ಗೀತೆಯನ್ನು ಹಾಡಿಸಿದ್ದಕ್ಕಾಗಿ ಬಲಪಂಥೀಯ ಗುಂಪುಗಳು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದೆ.
Advertisement
Advertisement
ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರೂ ಯಾರನ್ನೂ ಬಂಧಿಸಿಲ್ಲ. ಆದರೆ ಶಿಕ್ಷಣ ಇಲಾಖೆ ಶಾಲೆಯ ಪ್ರಾಂಶುಪಾಲನನ್ನು ಅಮಾನತುಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮಕ್ಕಳಿಂದ ಹಾಡಿಸಲಾದ ಪ್ರಾರ್ಥನೆ ಸರ್ಕಾರಿ ಶಾಲೆಗಳ ದೈನಂದಿನ ಪ್ರಾರ್ಥನಾ ವೇಳಾಪಟ್ಟಿಯಲ್ಲಿ ಇಲ್ಲ. ಬದಲಿಗೆ ಅದು ಒಂದು ಧರ್ಮಕ್ಕೆ ಸಂಬಂಧಿಸಿರುವುದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಾಸ್ಕ್ ಹಾಕಿದ್ರೆ ಮಾತ್ರ ಮೆಟ್ರೋ ಪ್ರವೇಶಕ್ಕೆ ಅನುಮತಿ
Advertisement
ವಿವಾದ ಉಂಟು ಮಾಡಿರುವ ಉರ್ದು ಗೀತೆಯನ್ನು 1902ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ. ಅವರು ಪ್ರಸಿದ್ಧ ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ಹಾಡನ್ನೂ ಬರೆದವರಾಗಿದ್ದಾರೆ.
2019ರಲ್ಲೂ ಫಿಲಿಭಿತ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದ ಉರ್ದು ಹಾಡನ್ನು ಹಾಡಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕದ ದೂರಿನ ಮೇರೆಗೆ ಅದಿಕಾರಿಗಳು ಕ್ರಮ ಕೈಗೊಂಡಿದ್ದರು. ಇದನ್ನೂ ಓದಿ: ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು