‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಮುಗಿಯಲು ಕೌಂಟ್‌ಡೌನ್ ಶುರುವಾಗಿದೆ. ಸುದೀಪ್ ಅವರು ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಫಿನಾಲೆಯಲ್ಲಿ ಮಂಜು ಮದುವೆ (Wedding) ಬಗ್ಗೆ ಚರ್ಚೆ ನಡೆದಿದೆ. ಸುದೀಪ್ ಮುಂದೆ ಅಪ್ಪನಿಗೆ ಮದುವೆಯಾಗುವುದಾಗಿ ಮಂಜು ಮಾತು ಕೊಟ್ಟಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ
ಫಿನಾಲೆಯಲ್ಲಿ ಉಗ್ರಂ ಮಂಜುಗಾಗಿ ಅವರ ತಂದೆ ಬಿಗ್ ಬಾಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಮಗನಿಗಾಗಿ ಕುಣಿದು ಕುಪ್ಪಳಿಸಿದ್ದಾರೆ. ನಿಮ್ಮ ತಂದೆ ನಿನಗಾಗಿ ಡ್ಯಾನ್ಸ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ. ನೀನು ಅಪ್ಪನಿಗೆ ಏನು ಗಿಫ್ಟ್ ಕೊಡುತ್ತೀರ ಎಂದು ಸುದೀಪ್ (Sudeep) ಅವರು ಮಂಜು ಅನ್ನು ಪ್ರಶ್ನೆ ಮಾಡಿದರು. ಅದಕ್ಕೆ ಮಂಜು, ಮದುವೆ ಆಗ್ತೀನಿ ಹುಡುಗಿ ಹುಡುಕಪ್ಪ ಎಂದರು. ಅದಕ್ಕೆ ಮಂಜು ಅವರ ತಂದೆ, ನಾವು ಮದುವೆಗೆ ರೆಡಿ ಇದ್ದೀನಿ. ಯಾರನ್ನಾದರೂ ಪ್ರೀತಿಸಿದ್ದರೆ ಹೇಳು ಅವರೊಟ್ಟಿಗೆ ಮದುವೆ ಮಾಡೋಣ ಎಂದರು.
ಮುಂಚೆ ಪ್ರೀತಿಸಿದ್ದೆ ಆದರೆ ಈಗ ಇಲ್ಲ ಎಂದು ಉತ್ತರಿಸಿದರು ಮಂಜು. ಆ ವಿಷಯ ತಮಗೂ ಗೊತ್ತೆಂದು ಮಂಜು ಅವರ ತಂದೆ. ಆದರೆ ಆಗ ನಾನೇ ಬೇಡ ಅಂದಿದ್ದೆ. ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲು ಅವರ ಮದುವೆ ಆಗಬೇಕು ಅದಾದ ಮೇಲೆ ನೋಡೋಣ ಎಂದಿದ್ದೆ. ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಆ ಹುಡುಗಿಯ ಮದುವೆ ಆಗಿ ಹೋಗಿತ್ತು. ಅದಾದ ಮೇಲೆ ಎಷ್ಟು ಬಾರಿ ಸಂಬಂಧಗಳನ್ನು ನೋಡಿ ಬಂದರೂ ಎಲ್ಲರನ್ನೂ ಬೇಡ ಬೇಡ ಎನ್ನುತ್ತಲೇ ಇದ್ದ ಎಂದರು ಉಗ್ರಂ ಮಂಜು ಅವರ ತಂದೆ.