ನವದೆಹಲಿ: 2025ರ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi) ಚಿಕ್ಕಪ್ಪ ಅಭಿಷೇಕ್ ಚೌಹಾಣ್ (Abhishek Chauhan) ಅವರು 102ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಭಾರತದ ಅಂಡರ್-19 ವಿಶ್ವಕಪ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್ ಅವರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 102ನೇ ರ‍್ಯಾಂಕ್ ಪಡೆದಿದ್ದು, ಐಪಿಎಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ರ‍್ಯಾಂಕ್ ಗಿಟ್ಟಿಸಿಕೊಂಡ ಯಾದಗಿರಿಯ ನಾಲ್ವರು
ಬಿಹಾರದ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿರುವ ಅಭಿಷೇಕ್ ಅವರು ಪ್ರೊಫೆಸರ್ ಡಾ. ಅಭಯ್ ಕುಮಾರ್ ಸಿಂಗ್ ಮತ್ತು ಅನುರಾಧಾ ರಜಪೂತ್ ಅವರ ಪುತ್ರ. ಅವರ ತಂದೆ ನಳಂದ ಮುಕ್ತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಸಂತೋಷ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
2022ರಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭಿಷೇಕ್ ಅವರು 2025ರಲ್ಲಿ ಪ್ರಾಥಮಿಕ ಮತ್ತು ಮುಖ್ಯ ಹಂತಗಳೆರಡಲ್ಲಿಯೂ ತೇರ್ಗಡೆಯಾದರು.ಇದನ್ನೂ ಓದಿ: ಬೆಂಗಳೂರು| ಕಾಲು ಜಾರಿ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ – 8 ಗಂಟೆ ಗುಂಡಿಯಲ್ಲೇ ಪರದಾಟ

