ಬೆಂಗಳೂರು: ಭಾರತೀಯ ಲೋಕಸೇವಾ ಆಯೋಗ 2021ರ ನಾಗರಿಕ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿದೆ. 685 ಮಂದಿಯನ್ನು ಯುಪಿಎಸ್‍ಸಿ ಆಯ್ಕೆ ಮಾಡಿದೆ.
Advertisement
ಆಯ್ಕೆ ಆದರವರಲ್ಲಿ 180 ಮಂದಿ ಐಎಎಸ್‍ಗೆ, 200 ಮಂದಿ ಐಪಿಎಸ್‍ಗೆ ಆಯ್ಕೆಯಾಗಿದ್ದಾರೆ. ಶ್ರುತಿ ಶರ್ಮಾ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಅಂಕಿತಾ ಅಗರ್ವಾಲ್ ಎರಡು, ಗಾಮಿನಿ ಸಿಂಗ್ಲಾ 3ನೇ ರ್‍ಯಾಂಕ್ ಪಡೆದಿದ್ದಾರೆ. ರಾಜ್ಯ 27 ಮಂದಿ ಯುಪಿಎಸ್‍ಸಿಗೆ ಆಯ್ಕೆ ಆಗಿದ್ದಾರೆ. ದಾವಣಗೆರೆಯ ಜನತಾ ಹೋಟೆಲ್ ಮಾಲೀಕರ ಪುತ್ರ ಅವಿನಾಶ್ ಮೊದಲ ಯತ್ನದಲ್ಲೇ 31ನೇ ರ್‍ಯಾಂಕ್ ಪಡೆದು ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ. ಇದನ್ನೂ ಓದಿ: ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ಶ್ರುತಿ ಶರ್ಮಾ ಟಾಪರ್
Advertisement
Advertisement
ಬೆಂಗಳೂರಿನ ಇಎಸ್‍ಐ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆಗಿರುವ ಚಿತ್ರದುರ್ಗದ ಡಾ.ಬೆನಕ 92ನೇ ರ್‍ಯಾಂಕ್ ಪಡೆದಿದ್ದಾರೆ. ಶಿರಸಿಯ ಮನೋಜ್ ಹೆಗಡೆ 213ನೇ ರ್‍ಯಾಂಕ್ ಪಡೆದಿದ್ದಾರೆ. ಕೊಡಗಿನ ಮುಂಡಂಡ ರಾಜೇಶ್ 222ನೇ ರ್‍ಯಾಂಕ್ ಗಳಿಸಿದ್ದಾರೆ. ಇತರರಿಗೆ ಐಎಎಸ್ ಕೋಚಿಂಗ್ ನೀಡುತ್ತಿದ್ದ ರಾಜೇಶ್ ಈಗ ತಾವೇ ಯುಪಿಎಸ್‍ಸಿಗೆ ಆಯ್ಕೆಯಾಗಿದ್ದಾರೆ. ಬೈಲಹೊಂಗಲದ ಸಾಹಿತ್ಯ 250ನೇ ರ್‍ಯಾಂಕ್ ಗಳಿಸಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ 27 ಮಂದಿಯಲ್ಲಿ ಬೆಂಗಳೂರಿನ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಿಂದಲೇ 19 ಅಭ್ಯರ್ಥಿಗಳು ಆಯ್ಕೆಯಾಗಿರೋದು ವಿಶೇಷ.
Advertisement