ನವದೆಹಲಿ: ದೇಶದ ಜನಪ್ರಿಯ ಸಿಎಂಗಳ ಪೈಕಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇದು ತಮ್ಮ ರಾಜ್ಯಗಳಲ್ಲಿನ ನಾಯಕರ ಜನಪ್ರಿಯತೆಯನ್ನು ನಿರ್ಣಯಿಸುವ ಉದ್ದೇಶದಿಂದ ಇತ್ತೀಚೆಗೆ ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹಾಗಿದ್ರೆ ಮೊದಲನೇ ಸಿಎಂ ಯಾರು ಎಂಬುದನ್ನು ನೋಡೋಣ.
Advertisement
ನವೀನ್ ಪಟ್ನಾಯಕ್ ಅತ್ಯಂತ ಜನಪ್ರಿಯ ಸಿಎಂ: ಹೌದು ಈ ಸಮೀಕ್ಷೆಯ ಪ್ರಕಾರ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 52.7% ರೇಟಿಂಗ್‌ನೊಂದಿಗೆ ಜನಪ್ರಿಯ ಸಿಎಂ ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನವೀನ್ ಪಟ್ನಾಯಕ್ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಬಿಜೆಪಿ ಸೇರೋದು ಸರಿಯಲ್ಲ: ಪರಮೇಶ್ವರ್
Advertisement
Advertisement
ಎರಡನೇ ಸ್ಥಾನದಲ್ಲಿ ಯೋಗಿ: ಯೋಗಿ ಆದಿತ್ಯನಾಥ್ (Yogi Adityanath) ಅವರು 51.3% ಜನಪ್ರಿಯತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೊಸ ಮಾದರಿಯ ಆಡಳಿತವೇ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಗೆ ಕಾರಣವೆಂದು ಹೇಳಲಾಗುತ್ತದೆ. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಮಹತ್ವದ್ದಾಗಿದೆ. ಸಮೀಕ್ಷೆಯಲ್ಲಿ ಶೇ.48.6 ರೇಟಿಂಗ್ ಪಡೆದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himant Biswa Sharma) ಮೂರನೇ ಸ್ಥಾನದಲ್ಲಿದ್ದರೆ, ಶೇ.42.6 ರೇಟಿಂಗ್ ಪಡೆದಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ನಾಲ್ಕನೇ ಸ್ಥಾನದಲ್ಲಿದ್ದಾರೆ.
Advertisement
ತ್ರಿಪುರಾ ಸಿಎಂ ಡಾ. ಮಾಣಿಕ್ ಸಹಾ (Dr. Manik Saha) ಅವರು 41.4% ರೇಟಿಂಗ್‌ನೊಂದಿಗೆ 5 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಬಿಜೆಪಿ ನಾಯಕ, ದಂತವೈದ್ಯರಾಗಿ ಮಾರ್ಪಟ್ಟ ರಾಜಕಾರಣಿ, ತ್ರಿಪುರಾದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಮಾಣಿಕ್ ಸಹಾ ಅವರು ಸತತ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಜನರಲ್ಲಿ ಬಹಳ ಜನಪ್ರಿಯರಾಗಿದ್ದಾರೆ.