ನಟಿ ನಿಶ್ವಿಕಾ ನಾಯ್ಡುಗೆ (Nishvika Naidu) ನಾಳೆ ಹುಟ್ಟು ಹಬ್ಬದ (Birthday) ಸಂಭ್ರಮ. ಆದರೆ ಈ ಬಾರಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಂತೆ. ಹಾಗಂತ ಅವರೇ ಪೋಸ್ಟ್ ಮಾಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಭಾವನೆಗಳು ಏರುಪೇರಾದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ವರ್ಷ ನನ್ನ ಜೀವನದಲ್ಲಿ ವೈಕ್ತಿಕವಾಗಿ ಭಾವನೆಗಳಲ್ಲಿ ಏರುಪೇರಾಗಿದೆ. ನನ್ನ ಲಿಯೋ ಇತ್ತೀಚೆಗೆ ನಮ್ಮನ್ನು ಬಿಟ್ಟು ಹೊರಟು ಬಿಟ್ಟು. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಭಾವನೆಗೆ ತುಂಬಾ ನೋವನ್ನುಂಟು ಮಾಡಿದೆ. ಹಾಗಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಯಾರೂ ನನ್ನ ಮನೆ ಹತ್ತಿರ ಬರಬೇಡಿ. ಭೇಟಿ ಮಾಡಬೇಡಿ. ಉಡುಗೊರೆ ತರಬೇಡಿ. ಇದ್ದಲ್ಲೇ ನನಗೆ ವಿಶ್ ಮಾಡಿ, ಹಾರೈಸಿ ಎಂದು ಅವರು ಕೇಳಿಕೊಂಡಿದ್ದಾರೆ. ನಿಶ್ವಿಕಾ ಸದ್ಯ ರಿಯಾಲಿಟಿ ಶೋವೊಂದರ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.