ನವದೆಹಲಿ: ಕಾಂಗ್ರೆಸ್ (Congress) ನಾಯಕ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ರಿಲೀಫ್ ನೀಡಿದೆ. ಅವರನ್ನು ಬಂಧಿಸದಂತೆ ಐದು ವಾರಗಳ ತಡೆ ನೀಡಿದೆ. ತಮ್ಮ ವಿರುದ್ಧದ ವಾರೆಂಟ್ (Warrant) ಪ್ರಶ್ನಿಸಿ ವಾರಣಾಸಿ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲು ನಾಲ್ಕು ವಾರಗಳ ಸಮಯ ನೀಡಿದೆ.
ತಮ್ಮ ವಿರುದ್ಧ ಹೊರಡಿಸಿದ್ದ ವಾರೆಂಟ್ ಪ್ರಶ್ನಿಸಿ ರಣದೀಪ್ ಸುರ್ಜೆವಾಲ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುರ್ಜೇವಾಲ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಬೆಳಗ್ಗೆ ವಿಷಯ ಪ್ರಸ್ತಾಪಿಸಿ ಕೂಡಲೇ ವಿಚಾರಣೆ ನಡೆಸುವಂತೆ ಒತ್ತಾಯಿಸಿದರು. ಇದಾದ ಬಳಿಕ ಪ್ರಕರಣದ ವಿಚಾರಣೆ ನಡೆಯಿತು. ಇದನ್ನೂ ಓದಿ: ಎಂಪಿ, ಎಂಎಎಲ್‍ಎಗಳ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ
ಪ್ರಕರಣವು 2000ದಲ್ಲಿ ನಡೆದಿದೆ. ಸಂವಾಸಿನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಆರೋಪದ ವಿರುದ್ಧ ಪ್ರತಿಭಟಿಸುತ್ತಿರುವಾಗ ವಾರಣಾಸಿಯ ವಿಭಾಗೀಯ ಆಯುಕ್ತರ ನ್ಯಾಯಾಲಯ ಮತ್ತು ಕಚೇರಿ ಆವರಣದಲ್ಲಿ ಹಿಂಸಾತ್ಮಕ ಘಟನೆ ನಡೆಯಿತು. ಗದ್ದಲವನ್ನು ಸೃಷ್ಟಿಸಿದ ಆರೋಪದ ಮೇಲೆ ಭಾರತೀಯ ಯೂತ್ ಕಾಂಗ್ರೆಸ್‌ನ ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸುರ್ಜೇವಾಲಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಸೌಜನ್ಯ ರೇಪ್ & ಮರ್ಡರ್ ಕೇಸ್- ಸಂತೋಷ್ ರಾವ್‍ನೇ ಆರೋಪಿ ಅಂತಾ ಮೇಲ್ಮನವಿ ಸಲ್ಲಿಸಿದ ಸಿಬಿಐ
ಈ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯ ಈಗ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂದು ಹೇಳಿದರು. ವಿಚಾರಣೆ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಜಾಮೀನು ರಹಿತ ವಾರೆಂಟ್‌ಗೆ ಐದು ವಾರಗಳ ತಡೆ ನೀಡಿತು. ಮತ್ತು ವಾರೆಂಟ್ ರದ್ದುಪಡಿಸಲು ಐದು ವಾರಗಳಲ್ಲಿ ವಾರಣಾಸಿಯ ವಿಶೇಷ ಜನಪ್ರತಿನಿಧಿಗಳ (ಸಂಸದ/ಶಾಸಕ) ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸುರ್ಜೇವಾಲಾ ಅವರಿಗೆ ಸೂಚಿಸಿತು. ಇದನ್ನೂ ಓದಿ: ಡಿಕೆಶಿಗೆ ಸಿಬಿಐ ಸಂಕಷ್ಟ – ಶುಕ್ರವಾರ ಸುಪ್ರೀಂನಲ್ಲಿ ನಿರ್ಣಾಯಕ ವಿಚಾರಣೆ