CinemaLatestMain PostSouth cinema

`ಕೆಜಿಎಫ್’ ಚಿತ್ರದ ಬಗ್ಗೆ ಹಗುರವಾಗಿ ಮಾತಾನಾಡಿದ ನಿರ್ದೇಶಕ ಸರೆಂಡರ್: ನೀಲ್- ಬುಚ್ಚಿಬಾಬು ಮೀಟಿಂಗ್

ಕ್ಷಿಣ ಭಾರತದ ಸ್ಟಾರ್ ಕಲಾವಿದರೆಲ್ಲ `ಕೆಜಿಎಫ್ 2′ ಸಿನಿಮಾವನ್ನ ನೋಡಿ ಹಾಡಿ ಹೊಗಳಿದ್ದಾರೆ. ರಾಕಿಭಾಯ್ ಖಡಕ್ ಆಕ್ಟಿಂಗ್ ಜತೆ ಪ್ರಶಾಂತ್ ನೀಲ್ ವರ್ಕ್ ನೋಡಿ ದಂಗಾಗಿದ್ದಾರೆ. ಆದರೆ ಈ ಹಿಂದೆ ತೆಲುಗು ನಿರ್ದೇಶಕನೊಬ್ಬ ಒಂದು `ಪುಷ್ಪ’ ನೂರು ಕೆಜಿಎಫ್‌ಗೆ ಸಮಾನ ಎಂದು ಹಗುರವಾಗಿ ಮಾತಾನಾಡಿದ್ದ ನಿರ್ದೇಶಕ ಇದೀಗ ಪ್ರಶಾಂತ್‌ನೀಲ್‌ ಅವರನ್ನು ಭೇಟಿಯಾಗಿದ್ದಾರೆ.

ಎಂದೂ  ಮಾಡಿರದ ಕನ್ನಡ ಚಿತ್ರ ಮಾಡಿರದ ದಾಖಲೆ ಈಗ `ಕೆಜಿಎಫ್ 2′ ಮಾಡಿದೆ. ಬರೋಬ್ಬರಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ದಾಖಲೆ ಬರೆದಿದೆ. ಈ ಹಿಂದೆ ಉಪ್ಪೇನಾ ನಿರ್ದೇಶಕ ಬುಚ್ಚಿಬಾಬು ಪುಷ್ಪ ಪ್ರೀ- ರಿಲೀಸ್ ಈವೆಂಟ್‌ನಲ್ಲಿ ತಮ್ಮ ಹೀರೋನಾ ಹೊಗಳೋ ಭರದಲ್ಲಿ ಕನ್ನಡದ `ಕೆಜಿಎಫ್ 2′ ಚಿತ್ರವನ್ನು ಕೀಳಾಗಿ ನೋಡಿದ್ರು ಒಂದು `ಪುಷ್ಪ’ ನೂರು ಕೆಜಿಎಫ್‌ಗೆ ಸಮಾನ ಎಂದು ಹಗುರವಾಗಿ ಮಾತಾನಾಡಿ ಟಕ್ಕರ್ ಕೊಟ್ಟಿದ್ದ ನಿರ್ದೇಶಕ ಇದೀಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನ ಭೇಟಿ ಮಾಡಿ, ಫೋಟೋ ಶೇರ್ ಮಾಡಿದ್ದಾರೆ.

ಒಂದು `ಪುಷ್ಪ’ ನೂರು ಕೆಜಿಎಫ್‌ಗೆ ಸಮಾನ ಎಂದಿದ್ದ ನಿರ್ದೇಶಕನೇ ಇಂದು ಕೆಜಿಎಫ್ ನಿರ್ದೇಶನಿಗೆ ಶರಣಾಗಿದ್ದಾರೆ. ಇನ್ನು ʻಪುಷ್ಪʼ ರಿಲೀಸ್ ಆದಮೇಲೆ ಕೆಜಿಎಫ್‌ನ ಮೀರಿಸೋದು ಬಿಡಿ ಕೆಜಿಎಫ್ ಲೆವೆಲ್‌ಗೂ ಬಂದಿಲ್ಲ ಅಂತಾ ತೆಲುಗು ಪ್ರೇಕ್ಷಕರೇ ಥಿಯೇಟರ್‌ನಲ್ಲಿ ಉತ್ತರ ನೀಡಿದ್ದರು. ಇದೀಗ ಪ್ರಶಾಂತ್‌ನೀಲ್ ಭೇಟಿ ಮಾಡಿರೋ `ಉಪ್ಪೇನಾ’ ಡೈರೆಕ್ಟರ್ ಬುಚ್ಚಿಬಾಬು ಇವರೇ ನನ್ನ ಸ್ಪೂರ್ತಿ ಅಂತಾ ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

ಅಂದು ಅಲ್ಲು ಅರ್ಜುನ್ ಮತ್ತು ಸುಕುಮಾರ್‌ನ್ನ ಮೆಚ್ಚಿಸೋ ಭರದಲ್ಲಿ ಕೆಜಿಎಫ್‌ನ್ನ ಕಡೆಗಣಿಸಿದ್ದ ನಿರ್ದೇಶಕ ಇಂದು ನೀಲ್ ನನ್ನ ಸ್ಪೂರ್ತಿ ಅಂತಾ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಪ್ರಶಾಂತ್‌ನೀಲ್ ಅವರನ್ನು ಮೀಟ್ ಮಾಡಿ ತಾವು ಕೆಜಿಎಫ್ ಚಿತ್ರದ ಅಭಿಮಾನಿ ಅಂತಾ ಪ್ರೂವ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಗತ್ತು ಈಗಾಲಾದರೂ ಅರ್ಥವಾಯಿತಲ್ವಾ ಅಂತಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

Leave a Reply

Your email address will not be published.

Back to top button