ಕುಡ್ಲದ ಬೆಡಗಿ ಕೃತಿ ಶೆಟ್ಟಿಗೆ (Krithi Shetty) ಸಾಲು ಸಾಲು ಸಿನಿಮಾಗಳು ಸೋಲು ಕಂಡರೂ ಅದೃಷ್ಟ ಅವರ ಕೈ ಹಿಡಿದಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ಮಾಣದ ಸಿನಿಮಾದಲ್ಲಿ ನಟಿಸುವ ಚಾನ್ಸ್ ಕೃತಿ ಶೆಟ್ಟಿಗೆ ಸಿಕ್ಕಿದೆ.
ಸತತ ಸಿನಿಮಾಗಳ ಸೋಲಿನ ನಡುವೆ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಎಂಬ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಕೃತಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ಕೃತಿ ಶೆಟ್ಟಿ ಜೊತೆ ಎಸ್ ಜೆ ಸೂರ್ಯ ಪ್ರದೀಪ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಟಿ ನಯನತಾರಾ (Nayanathara) ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಮರುದಿನವೇ ತಾಯಿಯಾಗ್ತಿರುವ ಸುದ್ದಿ ಹಂಚಿಕೊಂಡ ರ‍್ಯಾಪರ್
ನಯನತಾರಾ ದಂಪತಿಯ ಸಿನಿಮಾದಲ್ಲಿ ಕೃತಿ ನಟಿಸುತ್ತಿರುವ ಕಾರಣ, ಕುಡ್ಲದ ನಟಿಗೆ ಯಶಸ್ಸು ಸಿಗುತ್ತಾ? ಎಂದು ಕಾಯಬೇಕಿದೆ. ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.