ಬೆಂಗಳೂರು : ಯುಪಿಐ (Unified Payments Interface – UPI) ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಕೂ ಮೂಲಕ ಹಂಚಿಕೊಂಡಿದ್ದಾರೆ.
2021ರ ಜನವರಿಯಿಂದ ಸೆಪ್ಟೆಂಬರ್ ಅವಧಿಯ ಪ್ರತಿ ತಿಂಗಳ ಯುಪಿಐ ವಹಿವಾಟು ಅಂಕಿಅಂಶವನ್ನು ಕೂ ಮಾಡಿರುವ ಸಚಿವರು, ತಿಂಗಳಿನಿಂದ ತಿಂಗಳಿಗೆ ವಹಿವಾಟಿನ ಗಾತ್ರ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿರುವುದನ್ನು ತೋರಿಸಿದ್ದಾರೆ. ಜನವರಿ 2021ರಲ್ಲಿ 4.31 ಲಕ್ಷ ಕೋಟಿ ರೂ., ಮೊತ್ತದ ವಹಿವಾಟು ಯುಪಿಐ ಮೂಲಕ ನಡೆದಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ ಈ ಮೊತ್ತವು 6.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
Advertisement
Advertisement
ಅಮೆರಿಕ ಡಾಲರ್ ಎದುರಿನ ಭಾರತೀಯ ರೂಪಾಯಿ ಮೌಲ್ಯದ ಲೆಕ್ಕಾಚಾರದಲ್ಲಿ ಕಳೆದ ಆಗಸ್ಟ್ನಲ್ಲಿ ನಡೆದಿರುವ ಯುಪಿಐ ವಹಿವಾಟಿನ ಮೊತ್ತ 86.19 ಶತಕೋಟಿ ಡಾಲರ್. ಸೆಪ್ಟೆಂಬರ್ ತಿಂಗಳಲ್ಲಿ ಇದು 88.25 ಶತಕೋಟಿ ಡಾಲರ್ಗೆ ಮುಟ್ಟಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು
Advertisement
ಅಶ್ವಿನಿ ವೈಷ್ಣವ್ ಸಹ ತಾವು ಮಾಡಿರುವ ಕೂನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. #UPIChalega ಹ್ಯಾಷ್ಟ್ಯಾಗ್ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಯುಪಿಐ ವಹಿವಾಟು ಗಾತ್ರವು ಪ್ರತಿವರ್ಷ 1 ಲಕ್ಷ ಕೋಟಿ ಡಾಲರ್ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯ ವೇಗ ಸಿಗುತ್ತಿರುವ ಉದಾಹರಣೆ’ ಎಂದು ವಿವರಿಸಿದ್ದಾರೆ.