ಬೆಂಗಳೂರು: ಯುಪಿಐ (UPI) ಕ್ಯೂ ಆರ್ ಕೋಡ್ ಸ್ಕ್ಯಾನರ್ (QR Code) ಮುಖಾಂತರ ಹಣ ಪಡೆಯುವ ಅಂಗಡಿ ಮಾಲೀಕರೇ ಹುಷಾರಾಗಿರಿ. ಯುಪಿಐ ಸ್ಕ್ಯಾನರ್ ಅಪ್‌ಡೇಟ್ ಹೆಸರಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್ ಒಂದು ವಂಚನೆಗೆ ಇಳಿದಿದೆ.
ಕಲ್ಯಾಣ ನಗರದ ಮಂಜುನಾಥ ಟಿಫನ್ ಸೆಂಟರ್ ಮಾಲೀಕ ಭಾಸ್ಕರ್ ಅವವರ ವಂಚನೆಗೆ ಒಳಗಾಗಿ 48 ಸಾವಿರ ರೂ. ಕಳೆದುಕೊಂಡಿದ್ದಾರೆ. ಈಗ ಇವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ (Chandra Layout Police Station) ದೂರು ನೀಡಿದ ಬಳಿಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮುಷರಫ್ ಖಾನ್, ಮೊಹಮ್ಮದ್ ಸಿರಾಜ್ ಹೆಸರಿನ ಖಾತೆಯಿಂದ ವಂಚನೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಇತರರೊಂದಿಗೆ ಸೇರಿ ಕೇಜ್ರಿವಾಲ್ ಪಿತೂರಿ – ಜಾಮೀನು ಅರ್ಜಿ ವಜಾ
Advertisement
Advertisement
ಏ.4 ರ ಮಧ್ಯಾಹ್ನ 12 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಭಾಸ್ಕರ್ ಅವರ ಅಂಗಡಿಗೆ ಬಂದು ನಿಮ್ಮ ಪೇಟಿಎಂ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದು ಹೇಳಿದ್ದಾನೆ. ನಂತರ ಆತ ನಾನು ಅಪ್‌ಡೇಟ್ ಮಾಡಿಕೊಡುತ್ತೇನೆ ಎಂದು ಹೇಳಿ ಮೊಬೈಲ್ ತೆಗೆದುಕೊಂಡಿದ್ದಾನೆ. ಮೊಬೈಲ್ ತೆಗೆದುಕೊಂಡ ಬಳಿಕ ಏನೋ ಮಾಡಿ ಯುಪಿಐ ಮೂಲಕ ಒಂದು ರೂ. ಕಳುಹಿಸಿ ಮಧ್ಯಾಹ್ನ 12:30 ಸ್ಕ್ಯಾನರ್ ಅಪ್‌ಡೇಟ್ ಆಗಿದೆ ಎಂದು ಹೇಳಿ ತೆರಳಿದ್ದಾನೆ. ಆತ ಹೋದ ನಂತರ 18,000 ರೂ., 30,000 ರೂ. ಕಡಿತಗೊಂಡ ಮೆಸೇಜ್ ಇವರ ಮೊಬೈಲ್ ಬಂದಾಗ ತಾನು ಮೋಸ ಹೋದ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಪ್ಪಂದ ಕೊನೆಗೊಳಿಸಲು ಮುಂದಾದ ಸಿಟ್ಟಲ್ಲಿ ಕಂಪನಿಗೆ ಬ್ಯಾಂಡೇಜ್, ಕಾಂಡೋಮ್ ತುಂಬಿ ಸಮೋಸಾ ಪೂರೈಕೆ!
Advertisement
Advertisement
ಯುಪಿಐ ಗೊತ್ತಿಲ್ಲದವರೇ ಟಾರ್ಗೆಟ್:
ಯುಪಿಐ ಬಗ್ಗೆ ಗೊತ್ತಿಲ್ಲದವರನ್ನೇ ಟಾರ್ಗೆಟ್ ಮಾಡಿ ಹಣವನ್ನು ಕದಿಯಲಾಗುತ್ತಾರೆ. ಯಾವ ಯುಪಿಐ ಇರುತ್ತೋ ನಾವು ಅದರ ಏಜೆಂಟ್‌ಗಳು ಎಂದು ಆರಂಭದಲ್ಲಿ ಹೇಳಿ ನಿಮ್ಮ ಯುಪಿಐ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದು ನಂಬಿಸುತ್ತಾರೆ. ನೀವು ಈಗಲೇ ಅಪ್‌ಡೇಟ್ ಮಾಡದೇ ಇದ್ದರೆ ಹಣ ಸೆಂಡ್ ಆಗುವುದಿಲ್ಲ ಎಂದು ನಂಬಿಸುತ್ತಾರೆ. ಈ ವಿಚಾರ ತಿಳಿಯದ ವ್ಯಾಪಾರಿಗಳು ಮೊಬೈಲನ್ನು ಅವರ ಕೈಗೆ ಕೊಡುತ್ತಾರೆ. ಈ ಮೂಲಕ ವಂಚಕರು ಹಣವನ್ನು ಎಗರಿಸುತ್ತಾರೆ.
ಮಾಲೀಕರು ಏನು ಮಾಡಬೇಕು?
ಇದ್ದಕ್ಕಿದ್ದಂತೆ ಯಾರಾದ್ರೂ ಬಂದಾಗ ಕ್ಯೂಆರ್ ಕೋಡ್ ಅಪ್‌ಡೇಟ್ ಅಂದಾಗ ಮೊಬೈಲ್ ಮಸೇಜ್ ಚೆಕ್ ಮಾಡಿ. ಮೊಬೈಲ್‌ನಲ್ಲಿ ಈ ಹಿಂದೆ ಗ್ರಾಹಕರು ಕಳುಹಿಸಿರುವ ಹಣ ಬಂದಿದೆಯೋ ಇಲ್ಲವೋ ಎಂಬ ಮಸೇಜ್ ಬಂದಿರುತ್ತದೆ. ಒಂದು ವೇಳೆ ಯುಪಿಐ ನಂಬರ್ ಲಿಂಕ್ ಆಗಿರುವ ಬ್ಯಾಂಕ್‌ನಲ್ಲಿ ಸಮಸ್ಯೆ ಆಗಿದ್ದರೆ ಹಣ ವರ್ಗಾವಣೆಯೇ ಆಗಿರುವುದಿಲ್ಲ. ಮೊಬೈಲ್‌ನಲ್ಲಿ ಹಣ ವರ್ಗಾವಣೆಯಾಗಿರುವ ಮಸೇಜ್ ಬಂದಿದ್ದಲ್ಲಿ ಕ್ಯೂಆರ್ ಕೋಡ್‌ನಲ್ಲಿ ಸಮಸ್ಯೆ ಇಲ್ಲ ಎಂದು ಅರ್ಥ.