ನವದೆಹಲಿ: ಆನ್ಲೈನ್ ಪಾವತಿ ಕಷ್ಟ, ಗ್ರಾಮೀಣ ಭಾಗದಲ್ಲಿ ಯುಪಿಐ ಪಾವತಿ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಮಂದಿಗೆ ಭಾರತ ಜನ ತಿರುಗೇಟು ನೀಡಿದ್ದಾರೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ.
Advertisement
Advertisement
ಈ ಬಗ್ಗೆ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದಾರೆ. ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR) 147% ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
Advertisement
ಅದೇ ರೀತಿಯಲ್ಲಿ ಯುಪಿಐ ವಹಿವಾಟಿನ ಮೌಲ್ಯ ಆರ್ಥಿಕ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ. ಯಿಂದ ಆರ್ಥಿಕ ವರ್ಷ 2022-23ರಲ್ಲಿ 137 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಿಎಜಿಆರ್ 168% ಏರಿಕೆಯನ್ನು ತೋರಿಸುತ್ತದೆ. ಇದನ್ನೂ ಓದಿ: ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ – ಮಂಡ್ಯದಲ್ಲಿ ವರ್ಷದ ಮೊದಲ ಕೇಸ್ ಪತ್ತೆ
Advertisement
ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 11 ರವರೆಗೆ ಯುಪಿಐ 8,572 ಕೋಟಿ ವಹಿವಾಟುಗಳನ್ನು ಸಾಧಿಸಿದೆ. ಡಿಜಿಟಲ್ ಪಾವತಿ ವಹಿವಾಟುಗಳ ಒಟ್ಟಾರೆ ವಿಸ್ತರಣೆಗೆ ಯುಪಿಐ ಪ್ರಾಥಮಿಕ ಚಾಲಕವಾಗಿ ಹೊರಹೊಮ್ಮಿದೆ. ಆರ್ಥಿಕ ವರ್ಷ 2022-23 ರಲ್ಲಿ ಅಂತಹ ವಹಿವಾಟುಗಳಲ್ಲಿ 62% ಒಳಗೊಂಡಿದೆ. ಇದಲ್ಲದೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಆರ್ಥಿಕ ವರ್ಷ 2021-22 ರಲ್ಲಿ 9.9% ರಿಂದ ಆರ್ಥಿಕ ವರ್ಷ 2022-23 ರಲ್ಲಿ 7.8% ಕ್ಕೆ ಇಳಿದಿದೆ.
2016 ರಲ್ಲಿ ಪ್ರಾರಂಭವಾದ ಯುಪಿಐ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿMದ (NPCI) ರಚಿಸಲಾದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ತಕ್ಷಣದ ಪಾವತಿ ಸೇವೆಯ ಮೂಲಸೌಕರ್ಯವನ್ನು ಹತೋಟಿಯಲ್ಲಿಟ್ಟುಕೊಂಡು, ಯಾವುದೇ 2 ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾವಣೆಯನ್ನು ಯುಪಿಐ ಸುಗಮಗೊಳಿಸುತ್ತದೆ. ಇದನ್ನೂ ಓದಿ: ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್