ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

Public TV
2 Min Read
hunter film 2

ಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಅವರು ನಾಯಕನಾಗಿ ನಟಿಸಿರುವ ಒಂದೇ ಒಂದು ಸಿನಿಮಾ ಈವರೆಗೂ ರಿಲೀಸ್ ಆಗಿಲ್ಲ. ಆದರೆ, ಮೇಲಿಂದ ಮೇಲೆ ಅವರ ಸಿನಿಮಾಗಳು ಸೆಟ್ಟೇರುತ್ತಿವೆ. ಈಗಾಗಲೇ ಅವರ ಕೈಯಲ್ಲಿ ಮೂರು ಚಿತ್ರಗಳಿವೆ. ಅದರಲ್ಲಿ ಎರಡು ಚಿತ್ರಗಳು ಬಿಡುಗಡೆಗೂ ಸಿದ್ಧವಾಗಿವೆ. ಈಗ ನಾಲ್ಕನೇ ಚಿತ್ರಕ್ಕೆ ಅವರು ಸಹಿ ಮಾಡಿದ್ದಾರೆ. ಮೊನ್ನೆಯಷ್ಟೇ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಹಂಟರ್ ಎಂದು ಹೆಸರಿಡಲಾಗಿದೆ. ಸ್ವತಃ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ನಿರಂಜನ್ ಗೆ ಶುಭ ಕೋರಿದ್ದಾರೆ. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!

niranjan 2

ನಿರಂಜನ್ ಮೊದಲ ಸಿನಿಮಾನೇ ಉಪ್ಪಿ ಜತೆ 
ದಶಕದ ಹಿಂದೆ ತೆರೆಕಂಡ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಎ’ ಚಿತ್ರವೇ ನಿರಂಜನ್ ನಟನೆ ಮೊದಲ ಸಿನಿಮಾ. ಚಿಕ್ಕ ವಯಸ್ಸಿನಲ್ಲೇ ನಟನಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸದಾ ಮಲಗಿರುವ ಚಿಕ್ಕದೊಂದು ಮಗುವಿನ ದೃಶ್ಯವಿದೆ. ಆ ಮಗುವಿಗೆ ಈಗಿನ ನಿರಂಜನ್. ನಂತರ ನಾಟಕ, ಸಿನಿಮಾಗಳತ್ತ ಆಸಕ್ತಿ ಬೆಳೆದು, ಈಗ ಭರವಸೆಯ ನಾಯಕನಾಗಿದ್ದಾರೆ. ಈ ಚಿತ್ರಕ್ಕಾಗಿ ನಿರಂಜನ್ ಕಳೆದ ಆರು ತಿಂಗಳಿಂದ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಮಾಸ್ ಲುಕ್ ಇರಲಿದೆಯಂತೆ. ಇದನ್ನೂ ಓದಿ : ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್

niranjan 1

ತ್ರಿವಿಕ್ರಮ್ ಅವರ ಮೂರನೇ ಕನಸು
ಕನ್ನಡ ಸಿನಿಮಾ ರಂಗಕ್ಕೆ ‘ಪರಿ’ ಎಂಬ ಸದಭಿರುಚಿತ ಚಿತ್ರ ಕೊಟ್ಟಿರುವ, ನಂತರದ ದಿನಗಳಲ್ಲಿ ‘ಸೀಜರ್’ ಎನ್ನುವ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಿದ್ದ ತ್ರಿವಿಕ್ರಮ್ ಸಾಪಲ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೀಜರ್ ಸಿನಿಮಾದ ನಿರ್ದೇಶಕ ವಿನಯ್ ಕೃಷ್ಣ ಅವರನ್ನೇ ತಮ್ಮ ಮೂರನೇ ಚಿತ್ರಕ್ಕೂ ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ ತ್ರಿವಿಕ್ರಮ್. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

chandan shety

ಚಂದನ್ ಶೆಟ್ಟಿ ಸಂಗೀತ
ಸೀಜರ್ ಸಿನಿಮಾ ತಂಡದ ತಾಂತ್ರಿಕ ವರ್ಗವೇ ಈ ಸಿನಿಮಾಗೆ ಕೆಲಸ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಂದನ್ ಶೆಟ್ಟಿ ಅವರ ಸಂಗೀತ ಸಂಯೋಜನೆಯಲ್ಲಿ ಗೀತೆಗಳು ಮೂಡಿ ಬರಲಿವೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಒಪ್ಪುವಂತಹ ಹಾಡುಗಳು ಈ ಚಿತ್ರದಲ್ಲಿ ಇರಲಿವೆ ಅಂದಿದ್ದಾರೆ ಚಂದನ್ ಶೆಟ್ಟಿ. ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ನೆನಪಿಗೋಸ್ಕರ ಮ್ಯಾರಥಾನ್

hunter film 1

ಸೌಮ್ಯ ಮನನ್
ಕೇರಳದ ಬೆಡಗಿ ಸೌಮ್ಯ ಮೆನನ್ ಈ ಸಿನಿಮಾದ ನಾಯಕಿ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ ಅನುಭವ ಇವರಿಗಿದೆ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಸೇರಿದಂತೆ ಅನುಭವಿ ಕಲಾವಿದರ ತಂಡವೇ ಇಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *