ನಟ ಕಮ್ ನಿರ್ದೇಶಕ ರಿಯಲ್ ಸ್ಟಾರ್ ಉಪ್ಪಿ (Upendra) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎಲ್ಲರೂ ಕಾತರದಿಂದ ಎದುರು ನೋಡ್ತಿದ್ದ ಯುಐ ಚಿತ್ರದ ಸಾಂಗ್ ಈಗ ರಿಲೀಸ್ ಆಗಿದೆ. 5 ಭಾಷೆಯಲ್ಲಿ ರಿಲೀಸ್ ಆದ ಹಾಡಿನ ಸ್ಪೆಷಾಲಿಟಿ ಏನು? ಯಾವ ಕಂಟೆಂಟ್ ಮೇಲೆ ಉಪ್ಪಿ ಫೋಕಸ್ ಮಾಡಿದ್ದಾರೆ. ಕಾಯ್ತಿದ್ದವರಿಗೆ ಟ್ರೋಲ್ ಸಾಂಗ್ ಕೊಟ್ಟಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ (Actor Upendra) ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ. ಪ್ರತಿ ಕಂಟೆಂಟ್‌ನಲ್ಲೂ ಒಂದು ಸ್ಪೆಷಲ್ ಎಲಿಮೆಂಟ್‌ನ ನಿಮ್ಮ ಮುಂದೆ ಇಡಲು ಸಖತ್ ತಯಾರಿ ಮಾಡಿಕೊಂಡಿದ್ದಾರೆ. ಇಂದು ಹೊಸದೊಂದು ಹಾಡು ರಿಲೀಸ್ ಮಾಡಿದ್ದಾರೆ. ಟ್ರೋಲ್ ಆದ ಸೋಷಿಯಲ್ ಮೀಡಿಯಾದ ಕಂಟೆಂಟ್ ಮೇಲೆ ಸಾಂಗ್ ಮಾಡಿ ಮತ್ತೆ ಗಮನ ಸೆಳೆದಿದ್ದಾರೆ. ಚಾಲ್ತಿಯಲ್ಲಿರುವ ಎಲ್ಲಾ ವಿಚಾರಗಳ ಮೇಲೆ ಉಪ್ಪಿ ಗಮನ ಹರಿಸಿದ್ದಾರೆ. ಸಾಂಗ್ ನೋಡಿದವರು ಈ ವಿಚಾರಕ್ಕೆ ಉಪ್ಪಿ ಸ್ಪೆಷಲ್ ಅಂತಿದ್ದಾರೆ.
Kannada – https://t.co/nnvpjQpGL4
Telugu – https://t.co/uwbSOgJPY2
Hindi – https://t.co/rwcO8MiTqs
Tamil – https://t.co/vb80TwOGXO
Malayalam – https://t.co/UO3vRwyyz9
— Upendra (@nimmaupendra) March 4, 2024
ಸದ್ಯ ಟ್ರೋಲ್ ಸಾಂಗ್‌ಗೆ (Troll Song) ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಯುಐ ಬೆಡಗಿ ಡ್ಯಾನ್ಸ್‌ಗೆ ಪ್ಲಸ್ ಲಿರಿಕ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ
ಮುಂಬೈನ ಯುಟ್ಯೂಬ್ ಹೆಡ್ ಆಫೀಸ್‌ನಲ್ಲಿ ಈ ಸಾಂಗ್ ಲಾಂಚ್ ಮಾಡಲಾಗಿದೆ. ಬೆಳ್ಳುಳ್ಳಿ ಕಬಾಬ್, ಕರಿಮಣಿ ಮಾಲೀಕ, ಗುಮ್ಮಿಸಿಕೊಳ್ತೀಯಾ, ತಗಡು ಹೀಗೆ ನಾ ನಾ ವೈರಲ್ ಆದ ಪದಗಳನ್ನೇ ಬಳಸಿ ಯುಐ ಟ್ರೋಲ್ ಸಾಂಗ್ ರಿಲೀಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಹಾಡಿಗೆ ಆಯಾ ಭಾಷೆಗೆ ಅನುಸಾರ ಟ್ರೋಲ್‌ಗಳನ್ನ ಕಂಟೆಂಟ್ ಆಗಿ ಬಳಸಲಾಗಿದೆ. ಹಾಡು ಮತ್ತೆ ಮತ್ತೆ ನೋಡಬೇಕು ಅರ್ಥ ಮಾಡಿಕೊಳ್ಳಬೇಕು ಅಂತ ಫೀಲ್ ಕೊಡ್ತಿದೆ. ಒಟ್ನಲ್ಲಿ ಉಪ್ಪಿ ನಯಾ ಐಡಿಯಾಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಲಹರಿ ಸಂಸ್ಥೆ ಜೊತೆ ಶ್ರೀಕಾಂತ್ ಸೇರಿಕೊಂಡು `ಯುಐ’ಗೆ ಬಂಡವಾಳ ಹಾಕಿದ್ದಾರೆ.