ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ (UI) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 24 ಸಾವಿರ ಟಿಕೆಟ್ ಸೋಲ್ಡ್ ಆಗಿದ್ದಲ್ಲೇ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.
#UITheMovie – ₹50 Lakh’s advance bookings crossed in all over Karnataka less than 100shows 💥💥💥💥
👉Bengaluru – 17.6K
👉Mysuru – 4.8K
👉ROK – 1.5K
👉Total Karnataka – 24K tickets sold out in less than 24 hours 🔥🔥🔥🔥#UppiMania 🔥🔥🔥🔥🔥
— KFI Blockbuster’s (@Yogeesh19394215) December 17, 2024
Advertisement
ಇದೇ ಡಿ.20ರಂದು ರಿಲೀಸ್ ಆಗ್ತಿರುವ ‘ಯುಐ’ ಚಿತ್ರ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ. ಸೋಮವಾರದಿಂದ ಕರ್ನಾಟಕದಲ್ಲಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಓಪನ್ ಆಗಿದ್ದು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 24 ಸಾವಿರ ಟಿಕೆಟ್ ಸೋಲ್ಡ್ ಆಗಿದೆ. 50 ಲಕ್ಷದ ಮೌಲ್ಯದ ಟಿಕೆಟ್ ಮಾರಾಟವಾಗಗಿದೆ. ಇದನ್ನೂ ಓದಿ:ಅತಿಮಾನುಷ ತಿರುವಿನ ಪ್ರೇಮಕತೆ- ಡಿ.23ರಿಂದ ‘ನೂರು ಜನ್ಮಕೂ’ ಸೀರಿಯಲ್ ಆರಂಭ
Advertisement
Advertisement
‘ಕೆಜಿಎಫ್’ ಸಿನಿಮಾ ನಂತರ ಈ ಪ್ರಮಾಣದಲ್ಲಿ ಟಿಕೆಟ್ ಮಾರಾಟವಾಗಿದ್ದು ‘ಯುಐ’ ಹೆಗ್ಗಳಿಕೆ. ಇತ್ತೀಚೆಗೆ ಕನ್ನಡ ಸಿನಿಮಾವೊಂದು ಅತ್ಯಂತ ವೇಗವಾಗಿ ಸೋಲ್ಡ್ ಔಟ್ ಆಗಿರುವುದು ದಾಖಲೆಯಾಗಿದ್ದು ‘ಯುಐ’ ಚಿತ್ರದ ಮೇಲಿನ ಭಾರೀ ನಿರೀಕ್ಷೆಯನ್ನ ತೋರಿಸುತ್ತಿದೆ.
Advertisement
ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.