ಉಪೇಂದ್ರ (Upendra) ನಿರ್ದೇಶನದ ‘ಯುಐ’ (UI) ಸಿನಿಮಾ ಇದೇ ಡಿ.20ಕ್ಕೆ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಉಪೇಂದ್ರ ಮಾತನಾಡಿ, ಚಿತ್ರದ ಎರಡೂವರೆ ವರ್ಷಗಳ ಅನುಭವ ಹಂಚಿಕೊಂಡರು. ತಮ್ಮ ಕಥೆಗೆ ಲಹರಿ ಸಂಸ್ಥೆ ಮತ್ತು ಚಿತ್ರತಂಡದ ಬೆಂಬಲದ ಬಗ್ಗೆ ಮಾತನಾಡಿದರು. ಇದನ್ನೂ ಓದಿ:ಕಾಮನ್ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು- UI ಬಗ್ಗೆ ಡಾಲಿ ಮಾತು
Advertisement
‘ಯುಐ’ ಸಿನಿಮಾ ಪ್ಯಾನ್ ಇಂಡಿಯಾ ಮಾಡಬೇಕು ಅನ್ಕೊಂಡವರು ಶ್ರೀಕಾಂತ್. ಇನ್ನೂ ಲಹರಿ ಸಂಸ್ಥೆ 50 ವರ್ಷದ ಹಿಂದೆಯೇ ಮ್ಯೂಸಿಕ್‌ನಲ್ಲಿ ಸಾಧನೆ ಮಾಡಿದವರು. ‘ಯುಐ’ ಸಿನಿಮಾ ಇಷ್ಟು ಅದ್ಧೂರಿಯಾಗಿ ಬರೋಕೆ ಲಹರಿ ಸಂಸ್ಥೆ ಜೊತೆ ಇಡೀ ಚಿತ್ರತಂಡ ಕಾರಣ ಎಂದು ಉಪೇಂದ್ರ ಮಾತನಾಡಿದರು.
Advertisement
Advertisement
ನನ್ನ ಡೈರೆಕ್ಷನ್ ಅಂದರೆ ಹೀಗೆ ಹಾಗೆ ಅಂತಾರೆ. ನನಗೆ ಕಥೆ ಹೊರಗಡೆ ಸಿಗುತ್ತಿರಲಿಲ್ಲ. ಒಳಗಡೆ ಸಿಗುತ್ತಿತ್ತು. ಅಲ್ಲಿ ಎ, ಉಪೇಂದ್ರ ಸಿಕ್ತು. ನನ್ನ ಸಿನಿಮಾದಲ್ಲಿ ನೀವು ಇರುತ್ತೀರಾ. ನಿಮ್ಮೊಳಗೆ ಹೋಗಿ ಸಿನಿಮಾ ಮಾಡ್ತೀನಿ. ಸಿನಿಮಾರಂಗದಲ್ಲಿ ನನ್ನ ದೊಡ್ಡ ಜರ್ನಿ ಇದೆ. ಎಲ್ಲರೂ ಅಂತಾರೆ ನಾನು ಗೌಪ್ಯ ಮಾಡ್ತೀನಿ ಅಂತ. ಆದರೆ ನಾನು ಎಲ್ಲರ ಜೊತೆ ಡಿಸ್ಕಸ್ ಮಾಡ್ತೀನಿ. ನಿರ್ಮಾಪಕ ಮನೋಹರ್ ಈ ಚಿತ್ರತಂಡಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಇದು ಬೇರೆ ರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ನವೀನ್ ಟೆಕ್ನಿಕಲಿ ತುಂಬಾ ದೊಡ್ಡ ಲೆವೆಲ್ ಪ್ಲ್ಯಾನ್ ಮಾಡಿದರು. ಚಿತ್ರಕ್ಕಾಗಿ ಸೆಟ್‌ಗಳನ್ನ ನೆಕ್ಸ್ಟ್ ಲೆವೆಲ್ ಹಾಕೋಕೆ ಶುರು ಮಾಡಿದ್ವಿ. ಇನ್ನೂ ವಿದೇಶಕ್ಕೆ ಹೋಗಿ ಮ್ಯೂಸಿಕ್ ಮಾಡ್ಕೊಂಡ್ ಬಂದಿದ್ದೇವೆ. ಶಶಿಕುಮಾರ್ ಅದ್ಭುತ ಎಡಿಟರ್ ಎಂದು ಹೊಗಳಿದರು.
Advertisement
ಅಭಿಮಾನಿಗಳ ಶಿಳ್ಳೆ ಚಪ್ಪಾಳೆಯಿಂದ ನನಗೆ ಇವತ್ತಿಗೂ ಸಿನಿಮಾ ಮಾಡಬೇಕು ಅನ್ನುವ ಸ್ಪಿರಿಟ್ ಬರೋದು ಎಂದಿದ್ದಾರೆ. ಸಿನಿಮಾ ಸಾಕು ಬಿಟ್ಟು ಬಿಡೋಣ ಅಂದುಕೊಳ್ಳುತ್ತೇನೆ. ಆದರೆ ಇದೇ ನನಗೆ ಪ್ರತಿಬಾರಿ ಸ್ಫೂರ್ತಿ ಕೊಡೋದು ಎಂದಿದ್ದಾರೆ. ಯಾರನ್ನೂ ಯಾರಿಗೂ ಕಂಪೇರ್ ಮಾಡ್ಕೊಬೇಡಿ. ಪ್ರತಿಯೊಬ್ಬರೂ ಯುನಿಕ್ ಡೈರೆಕ್ಟರ್. ಯಾವಾಗೂ ಎಲ್ಲರ ಮಾತನ್ನ ಕೇಳಿ, ಜೊತೆಗೆ ನಿಮ್ಮ ಮಾತನ್ನ ನೀವು ಕೇಳಿ ಎಂದಿದ್ದಾರೆ ಉಪೇಂದ್ರ.