ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ

Advertisements

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಅಪ್ಪು ಪಪ್ಪು ಸಿನಿಮಾದ ಮೂಲಕ ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದ ಸ್ನೇಹಿತ್, ಆನಂತರ ವಿದ್ಯಾಭ್ಯಾಸದ ಕಾರಣಕ್ಕಾಗಿ ಸಿನಿಮಾ ರಂಗದಿಂದ ದೂರವಿದ್ದಾರೆ. ಸದ್ಯ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೆ ಸಿನಿಮಾ ರಂಗಕ್ಕೆ ಬರುವುದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರ ಮೇಲೆ ಆರೋಪಗಳು ಬರುತ್ತಿವೆ.

Advertisements

ತಮ್ಮ ಮನೆಯ ಎದುರಿನ ಮಹಿಳೆ ಮತ್ತು ಆಕೆಯ ಪತಿಯ ಜೊತೆ ಗಲಾಟೆ ಮಾಡಿದರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ. ವರ್ಷದ ಹಿಂದೆಯೇ ಇಂಥದ್ದೇ ಮತ್ತೊಂದು ಕಾರಣಕ್ಕಾಗಿಯೂ ದೂರು ದಾಖಲಾಗಿತ್ತು. ನಂತರ ದೂರುದಾರರೇ ಸ್ನೇಹಿತ್ ಪಾತ್ರವಿಲ್ಲ ಎಂದು ಹೇಳಿದ್ದರು. ಈ ಬಾರಿಯೂ ಸ್ನೇಹಿತ್ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಮತ್ತೆ ಸ್ನೇಹಿತ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

Advertisements

ನಿನ್ನೆಯಷ್ಟೇ ಸೌಂದರ್ಯ ಜಗದೀಶ್ ಮತ್ತು ಪತ್ನಿ ರೇಖಾ ಅವರು ಮಾಧ್ಯಮ ಗೋಷ್ಠಿ ಕರೆದು, ಮಗನ ಬಗ್ಗೆ ಮಾತನಾಡಿದ್ದರು. ಅವನು ಆ ರೀತಿಯ ಹುಡುಗನಲ್ಲ, ಅಂತಹ ಮಕ್ಕಳನ್ನು ಪಡೆಯುವುದಕ್ಕಾಗಿ ನಾವು ಪುಣ್ಯ ಮಾಡಿದ್ದೆವು ಎಂದು ಹೇಳಿದ್ದರು. ಮಗನ ಮೇಲೆ ಯಾಕೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದೂ ಹೇಳಿದ್ದರು. ಇದೀಗ ಸ್ನೇಹಿತ್ ಪರ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬ್ಯಾಟ್ ಮಾಡಿದ್ದಾರೆ. ಸ್ನೇಹಿತ್ ನ ಒಳ್ಳೆತನವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Advertisements

‘ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃಧು ಸ್ವಭಾವದವರು, ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮತ್ತು ಮಗ ಸ್ನೇಹಿತ್ ಹಾಗೂ ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆ ಆಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

Live Tv

Advertisements
Exit mobile version