ಸ್ಯಾಂಡಲ್‌ವುಡ್‌ನಲ್ಲಿ(Sandalwood) ಓಂ, ಲವ ಕುಶ, ಪ್ರೀತ್ಸೇ ಸಿನಿಮಾಗಳ ಮೋಡಿ ಮಾಡಿದ್ದ ಶಿವಣ್ಣ(Shivanna) ಮತ್ತು ಉಪೇಂದ್ರ (Upendra) ಜೋಡಿ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ಬರುತ್ತಿದ್ದಾರೆ. ಒಂದು ಲಾಂಗ್ ಗ್ಯಾಪ್ ನಂತರ ಅಭಿಮಾನಿಗಳ ಆಸೆಯಂತೆಯೇ ಪವರ್‌ಫುಲ್ ಸಬ್ಜೆಕ್ಟ್‌ನಲ್ಲಿ ಉಪ್ಪಿ ಮತ್ತು ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ರಮೇಶ್ ರೆಡ್ಡಿ (Ramesh Reddy) ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ `45′ ಚಿತ್ರದಲ್ಲಿ ಶಿವಣ್ಣ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ಇದೇ ಚಿತ್ರಕ್ಕೆ ರಿಯಲ್ ಸ್ಟಾರ್ ಉಪ್ಪಿ ಎಂಟ್ರಿ ಆಗಿದೆ.
View this post on Instagram
ಅರ್ಜುನ್ ಜನ್ಯ (Arjun Janya) ಅವರ ಬಹುನಿರೀಕ್ಷಿತ ಸಿನಿಮಾ `45′ ಇದೇ ಡಿಸೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಶಿವಣ್ಣ ಮತ್ತು ಉಪೇಂದ್ರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇನ್ನೂ ಭಿನ್ನ ಕಥೆಯಲ್ಲಿ ಮೂಡಿ ಬರುತ್ತಿರುವ ಶಿವಣ್ಣ ಮತ್ತು ಉಪೇಂದ್ರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.