ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ UI ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಎಐ ಯುಗದಲ್ಲಿ ಯುಐ ಜಗತ್ತು 2040ರಲ್ಲಿ ಹೇಗಿರುತ್ತದೆ? ಟ್ರೈಲರ್ ಉಪ್ಪಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇಂದು (ಡಿ.2) ನಡೆದ ಸುದ್ದಿಗೋಷ್ಠಿಯಲ್ಲಿ ‘ಯುಐ’ ಚಿತ್ರದ ಸೀಕ್ರೆಟ್ ಅನ್ನು ನಟ ರಿವೀಲ್ ಮಾಡಿದ್ದಾರೆ.
Advertisement
‘ಯುಐ’ ಸಿನಿಮಾ ಇದು ತಲೆಗೆ ಹುಳ ಬಿಡೋ ಸಿನಿಮಾ ಅಲ್ಲ. ಹುಳ ತೆಗೆಯೋ ಸಿನಿಮಾ ಎಂದಿದ್ದಾರೆ. ನಿಮ್ಮ ತಲೆಯಲ್ಲಿ ಹುಳ ಎಷ್ಟಿದೆ ಅನ್ನೋದ್ದರ ಮೇಲೆ ಸಿನಿಮಾ ಎಷ್ಟು ಸಲ ನೋಡಬೇಕು ಅನ್ನೋದನ್ನ ನೀವು ನಿರ್ಧಾರ ಮಾಡಬೇಕು. ‘ಯು’ ಮತ್ತೆ ‘ಐ’ ಸೇರಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಇದನ್ನೂ ಓದಿ:‘ಸಾಯಬೇಕು ಅಂದ್ರೆ ನೀನು ಸಾಯಿ’- ಶೋಭಿತಾ ಬರೆದ ಡೆತ್‌ನೋಟ್‌ನಲ್ಲಿ ಹೊಸ ಟ್ವಿಸ್ಟ್
Advertisement
Advertisement
ನಾನು ವಾರ್ನರ್ (ಟ್ರೈಲರ್) ತೋರಿಸಿ ಹೆದರಿಸುತ್ತಿಲ್ಲ. ನನ್ನ ದೃಷ್ಟಿಕೋನದಲ್ಲಿ ಸಿನಿಮಾ ಮಾಡಿಲ್ಲ. ನಿಮ್ಮ ಎಲ್ಲರ ಯೋಚನೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಪ್ರೇಕ್ಷಕರು ಯಾವತ್ತೂ ತಪ್ಪು ಮಾಡಲ್ಲ. ಅವರ ನಿರ್ಧಾರ ಸರಿಯಾಗಿರುತ್ತದೆ. ಆ ನಂಬಿಕೆಯಲ್ಲೇ ಸಿನಿಮಾ ಮಾಡ್ತೀನಿ. ನಾನು ಕನ್ಫೂಸ್ ಮಾಡಲ್ಲ. ಕನ್ವಿನ್ಸ್ ಮಾಡೋಕೆ ಪ್ರಯತ್ನಪಡುತ್ತೇನೆ. ಸಿನಿಮಾ ಗೆಲ್ಲಿಸೋದು ಪ್ರೇಕ್ಷಕರ ಕೈಯಲ್ಲಿರುತ್ತದೆ ಎಂದು ಉಪೇಂದ್ರ ಮಾತನಾಡಿದರು.
Advertisement
ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತಾ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.