ಬೆಂಗಳೂರು: ಕೊರೊನಾ ತಡೆಗಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿದ್ರೂ ಜನರು ಮನೆಯಿಂದ ಹೊರಗೆ ಬರೋದನ್ನು ನಿಲ್ಲಿಸಿಲ್ಲ. ಇತ್ತ ಸಿಎಂ ಯಡಿಯೂರಪ್ಪನವರು ಸಹ ಲಾಕ್‍ಡೌನ್ ಸರಿಯಾಗಿ ಪಾಲನೆ ಆಗ್ತಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರ ಹಾಕಿದ್ದಾರೆ. ಇದೀಗ ಪ್ರಜಾಕೀಯದ ಪ್ರಜಾಕಾರಿಣಿ ಉಪೇಂದ್ರ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
1. ಶೇಕಡ ನೂರಕ್ಕೆ ನೂರು ಲಾಕ್‍ಡೌನ್: ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ
* ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ.
* ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.
2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‍ಡೌನ್ ತೆರೆಯಿರಿ: ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆ ನಾಯಕರಯ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
* ಲಾಕ್‍ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ?
https://twitter.com/nimmaupendra/status/1248179331072790528
ಇಷ್ಟೆಲ್ಲಾ ಲಾಕ್‍ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್‍ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ.
ಮಲಗಿದ್ರೆ-ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ
ಎರಡು ಸಲಹೆಗಳನ್ನ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ನ್ನು ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿದ್ದಾರೆ.