ಬರೋಬ್ಬರಿ ಏಳು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಮೊನ್ನೆಯಷ್ಟೇ ಹೊಸ ಸಿನಿಮಾದ ಮುಹೂರ್ತ ಮುಗಿಸಿದ್ದ ಉಪ್ಪಿ, ಇದೀಗ ಬೆಂಗಳೂರಿನ ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ. ಯುಐ ಅಥವಾ ನಾನಾ ಅರ್ಥಗಳನ್ನು ಹೊಮ್ಮಿಸುವಂತಹ ಟೈಟಲ್ ಅನ್ನು ತಮ್ಮ ಸಿನಿಮಾಗೆ ಇಟ್ಟು ಕುತೂಹಲ ಮೂಡಿಸಿರುವ ಅವರು, ಈ ಚಿತ್ರಕ್ಕಾಗಿ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ಸಸ್ಪೆನ್ಸ್.
Advertisement
ಸಾಮಾನ್ಯವಾಗಿ ತಮ್ಮ ಚಿತ್ರಗಳಿಗೆ ಹೆಸರಾಂತ, ಪ್ರತಿಭಾನ್ವಿತ ನಾಯಕಿಯರನ್ನೇ ಆಯ್ಕೆ ಮಾಡಿಕೊಳ್ಳುವ ಉಪ್ಪಿ, ಈ ಬಾರಿಯೂ ಅದನ್ನೇ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಹೆಸರು ಮಾಡಿರುವ ಶ್ರೀನಿಧಿ ಶೆಟ್ಟಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಯೋಚಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ಹಂತದ ಮಾತುಕತೆ ಕೂಡ ಮುಗಿದಿದೆಯಂತೆ. ಆದರೆ, ಅಧಿಕೃತ ಹೇಳಿಕೆ ಬಾಕಿ ಇದೆ ಎನ್ನುವ ಮಾತೂ ಇದೆ. ಇದನ್ನೂ ಓದಿ:ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?
Advertisement
Advertisement
ಉಪ್ಪಿ ಸಿನಿಮಾಗಳು ಅಂದಾಗ ಅಲ್ಲೊಂದು ನಿರೀಕ್ಷೆ ಇದ್ದೇ ಇರುತ್ತದೆ. ಈ ಸಿನಿಮಾ ಟೈಟಲ್ ನಿಂದಾಗಿಯೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ. ಅಲ್ಲದೇ, ಈಗಾಗಲೇ ರಿಲೀಸ್ ಮಾಡಿರುವ ಪೋಸ್ಟರ್ ಕೂಡ ಹಲವಾರು ಕಥೆಗಳನ್ನು ಹೇಳುತ್ತಿದೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ಮೂಡಿ ಬರುತ್ತಿರುವುದು ಮತ್ತೊಂದು ವಿಶೇಷ. ಅಂದಹಾಗೆ ಲಹರಿ ಸಂಸ್ಥೆಯ ಜೊತೆಗೆ ಕೆ.ಪಿ.ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.