ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಹಿಂದೆ ಮುತ್ತಪ್ಪ ರೈ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಹೊರಟಿದ್ದರು. ಅದ್ಧೂರಿಯಾಗಿ ಮುಹೂರ್ತ ಕೂಡ ಆಗಿತ್ತು. ಆ ಸಿನಿಮಾ ‘ರೈ’ ಎಂದು ಹೆಸರಿಟ್ಟಿದ್ದರು. ತಮ್ಮ ಬಗೆಗಿನ ಸಿನಿಮಾದ ಬಗ್ಗೆ ಸ್ವತಃ ಮುತ್ತಪ್ಪ ರೈ ಕೂಡ ಕುತೂಹಲದಿಂದ ಎದುರು ನೋಡುತ್ತಿದ್ದರು. ಆದರೆ, ಆ ಸಿನಿಮಾ ಆಗಲೇ ಇಲ್ಲ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್
Advertisement
ಬೆಂಗಳೂರಿನಲ್ಲೇ ‘ರೇ’ ಸಿನಿಮಾದ ಮುಹೂರ್ತ ನಡೆದಿತ್ತು. ಮುತ್ತಪ್ಪ ರೈ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕಾಣಿಸಿಕೊಳ್ಳುತ್ತಿದ್ದರು. ಮುತ್ತಪ್ಪ ರೈ ಜತೆಗಿನ ವಿವೇಕ್ ಓಬೆರಾಯ್ ಫೋಟೋ ಭಾರೀ ವೈರಲ್ ಕೂಡ ಆಗಿತ್ತು. ಆದರೆ, ಮುಹೂರ್ತದ ನಂತರ ಸಿನಿಮಾ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್
Advertisement
Advertisement
ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಅದೇ ಕಥೆಯನ್ನೇ ಬೇರೆ ಟೈಟಲ್ ನೊಂದಿಗೆ ತರಲಿದ್ದಾರೆ ಎನ್ನಲಾಗುತ್ತಿದೆ. ನೆನ್ನೆಯಷ್ಟೇ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಸಿನಿಮಾಗೆ ‘ಆರ್’ ಎಂದು ಹೆಸರಿಟ್ಟಿದ್ದಾರೆ. ಅದೊಂದು ಬೆಂಗಳೂರು ಭೂಗತ ಜಗತ್ತಿನ ಕಥೆ ಎಂದು ಹೇಳುವ ಮೂಲಕ ಮುತ್ತಪ್ಪ ರೈ ಬಗೆಗಿನ ಕಥೆಯೇ ಇದಾಗಿದೆ ಎಂದು ಕೆಲವು ಸೂಚನೆಗಳನ್ನೂ ಕೊಟ್ಟಿದ್ದಾರೆ. ಆದರೆ, ಅದು ಯಾರ ಕಥೆ ಎನ್ನುವುದನ್ನು ವರ್ಮಾ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ, ಇದು ರೈ ಸಿನಿಮಾದ ಕಥೆಯೇ ಇಲ್ಲಿ ಬಳಕೆ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ
Advertisement
ರಾಮ್ ಗೋಪಾಲ್ ವರ್ಮಾ ಅವರು ಶೇರ್ ಮಾಡಿರುವ ‘ಆರ್’ ಸಿನಿಮಾದ ಒಂದೆರಡು ಗ್ಲಿಂಪ್‌ಗಳನ್ನು ಹಾಕಿದ್ದು, ಅದರಲ್ಲಿ ಉಪ್ಪಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವೀಡಿಯೋದಲ್ಲಿ, ಉಪೇಂದ್ರ ಚಾಕುವಿನಿಂದ ತನ್ನ ಬೆರಳುಗಳನ್ನು ಹುಜ್ಜುವುದು, ನಂತರ ಅದನ್ನು ಚುಂಬಿಸುವುದನ್ನು ಕಾಣಬಹುದು. ಈ ಗ್ಲಿಂಪ್‍ಗಳು ವಿಶಿಷ್ಟ ಶೈಲಿಯಲ್ಲಿವೆ.