ಚಿಕ್ಕಬಳ್ಳಾಪುರ: ಸೂಪರ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿರುವ ‘ಐ ಲವ್ ಯೂ’ ಸಿನಿಮಾದ ಆ್ಯಕ್ಷನ್ ಫೈಟ್ ಸೀನ್ ಚಿತ್ರೀಕರಣವನ್ನು ವಿಶ್ವಪ್ರಸಿದ್ಧ ಪ್ರವಾಸಿಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಮಾಡಿದ್ದಾರೆ.
ಕನ್ನಡ ಚಲನಚಿತ್ರ ರಂಗದ ಸ್ಟಾರ್ ನಿರ್ದೇಶಕ ಎಂದೇ ಖ್ಯಾತಿಯಾಗಿರುವ ಆರ್. ಚಂದ್ರು ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ‘ಐ ಲವ್ ಯೂ’ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಈಗ ಆ್ಯಕ್ಷನ್ ಸೀನ್ ಶೂಟಿಂಗ್ ಪ್ರೇಮಿಗಳ ಧಾಮ ಎಂದೆ ಖ್ಯಾತಿಯಾಗಿರುವ ನಂದಿಗಿರಿಧಾಮದಲ್ಲಿ ನಡೆಯುತ್ತಿದೆ.
ಪ್ರೇಮಿಗಳು ತಮ್ಮ ಪಾಡಿಗೆ ತಾವು ನಂದಿಗಿರಿಧಾಮಕ್ಕೆ ಬಂದು, ಪ್ರೀತಿ-ಪ್ರೇಮ ಅಂತ ಪಿಸುಮಾತಿನಲ್ಲಿ ತೊಡಗಿರುವಾಗ ಪ್ರೇಮಿಗಳನ್ನು ಕಿಚಾಯಿಸುವ ದುಷ್ಕರ್ಮಿಗಳ ಸೀನ್ ಹಾಗೂ ಚಿತ್ರದ ನಟ ಆಗಮಿಸಿ ದುಷ್ಕರ್ಮಿಗಳನ್ನು ಹೊಡೆಯುತ್ತಿರುವ ಆ್ಯಕ್ಷನ್ ಸೀನ್ ನನ್ನು ಚಿತ್ರೀಕರಣ ಮಾಡಲಾಯಿತು ಎಂದು ನಟ ಉಪೇಂದ್ರ ಹೇಳಿದ್ದಾರೆ.
ಸೂಪರ್ ಸ್ಟಾರ್ ನಟ ಉಪೇಂದ್ರ ಜೊತೆಗೂಡಿ ನಾನು ಆರ್. ಚಂದ್ರು ಅವರು ಈಗಾಗಲೇ ಬ್ರಹ್ಮ ಚಿತ್ರವನ್ನು ಕನ್ನಡಕ್ಕೆ ನೀಡುವುದರ ಮೂಲಕ ಯಶಸ್ವಿ ಕಂಡಿದ್ದಾರೆ. ತಮ್ಮ ಬಹುತೇಕ ಚಿತ್ರಗಳಲ್ಲಿ ಪ್ರೀತಿ-ಪ್ರೇಮ ನವಿರಾದ ಭಾವನೆಗಳನ್ನೆ ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡಿರುವ ಆರ್.ಚಂದ್ರು, ಐ ಲವ್ ಯೂ ಚಿತ್ರದಲ್ಲಿಯೂ ಇದೆ ರೀತಿಯ ಕಥೆಯ ಹಂದರವನ್ನು ಇಟ್ಟುಕೊಂಡು ವಿಶಿಷ್ಠವಾಗಿ ಐ ಲವ್ ಯೂ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ತಮ್ಮ ತವರು ತಾಲೂಕು ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಇದೇ ಮೊದಲ ಬಾರಿ ಚಲನಚಿತ್ರ ಶೂಟಿಂಗ್ ಮಾಡುತ್ತಿರುವುದಕ್ಕೆ ಚಿತ್ರದ ಕಥೆಗೂ ಅವಿನಾಭಾವ ನಂಟಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ.
ನಂದಿಗಿರಿಧಾಮದ ಪ್ರೀತಿ-ಪ್ರೇಮ ಪ್ರಣಯದ ಜೊತೆ ಜೊತೆಯಲ್ಲೇ, ಪ್ರಕೃತಿ ಸೊಬಗಿನ ಆಹ್ಲಾದಕರ ವಾತಾವರಣ ವಿಶ್ವಪ್ರಸಿದ್ಧ. ತಮ್ಮ ಸ್ಟಾರ್ ನಟ ಉಪೇಂದ್ರರನ್ನು ನೋಡಿ ಪ್ರವಾಸಿಗರು ನಾ ಮುಂದು ತಾಮುಂದು ಅಂತ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಬಹುನಿರೀಕ್ಷಿತ ‘ಐ ಲವ್ ಯೂ’ ಚಿತ್ರ ಡಿಸೆಂಬರ್ ನಲ್ಲೇ ತೆರೆ ಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv