ಬೆಂಗಳೂರು: ಕೆಲವು ದಿನಗಳ ಹಿಂದೆ ಶಿಷ್ಯ, ನಟರಾಗಿರುವ ಉಪೇಂದ್ರ ರಾಜಕೀಯ ಪ್ರವೇಶಿಸಿದ್ದಾಗ ಪ್ರತಿಕ್ರಿಯಿಸಿದ ಕಾಶಿನಾಥ್, ಪ್ರಯತ್ನ ಭಿನ್ನವಾಗಿದ್ದು ಯಾವುದಕ್ಕೂ ಹೆದರಬೇಡ. ಸೋಲು-ಗೆಲುವು ಬಗ್ಗೆ ಚಿಂತಿಸಿರಬಾರದು, ನಮ್ಮ ಕೆಲಸದ ಫಲಾಪೇಕ್ಷವನ್ನು ದೇವರಿಗೆ ಬಿಟ್ಟು ಮುನ್ನುಗ್ಗುತ್ತಿರಬೇಕು. ಮುಂದಿನ ದಿನಗಳಲ್ಲಿ ನಿನ್ನ ಆಲೋಚನೆಗಳಿಗೆ ಬೆಂಬಲ ಸಿಗುತ್ತದೆ ಎಂದು ಶುಭಕೋರಿದ್ದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, ನಿರೀಕ್ಷೆ ಮಾಡದ ರೀತಿಯಲ್ಲಿ ಬೆಳೆದಂತಹ ಜನರನ್ನು ನಾವು ನೋಡಿದ್ದೇವೆ. ಪಾರ್ಟಿ ಓರಿಯೆಂಟಡ್ ಪೊಲಿಟಿಕ್ಸ್ ಗಿಂತ, ಪರ್ಸನ್ ಓರಿಯಟೆಂಡ್ ಪೊಲಿಟಿಕ್ಸ್ ಇರಬೇಕೆಂದು ನಾನು ತುಂಬಾ ಬಾರಿ ಹಲವರೊಂದಿಗೆ ಚರ್ಚೆ ಮಾಡಿದ್ದೇನೆ. ಇವತ್ತಿನ ರಾಜಕೀಯಕ್ಕೆ ಉಪೇಂದ್ರ ಹೊಂದುತ್ತರೋ ಎಂಬ ಪ್ರಶ್ನೆ ಅಲ್ಲ. ಒಬ್ಬ ವ್ಯಕ್ತಿ ಪ್ರಯತ್ನ ಮಾಡುವುದು ಮುಖ್ಯ. ಪ್ರಯತ್ನ ಮಾಡದೇ ಹೊಂದುತ್ತಾರೆ ಅಂತಾ ಚಿಂತಿಸುತ್ತಾ ಕುಳಿತರೆ ಯಾವುದು ಸಾಧ್ಯವಾಗಲ್ಲ ಅಂತಾ ಹೇಳಿದ್ರು.
Advertisement
Advertisement
ಉಪೇಂದ್ರ ರೀತಿಯಲ್ಲಿ ಯೋಚಿಸುವರು ಸಾವಿರ ಜನ ಇರಬಹುದು. ಇಂದು ಅವರೆಲ್ಲಾ ನಮ್ಮ ಕಡೆಯಿಂದ ಏನು ಮಾಡಲಿಕ್ಕೆ ಸಾಧ್ಯವಾಗಲ್ಲ ಎಂಬ ದೃಷ್ಟಿಕೋನದಲ್ಲಿ ಇರಬಹುದು. ಆಗಲ್ಲ ಎಂಬ ಯೋಚನೆಯಲ್ಲಿ ಇದ್ದವರನ್ನು ಸಿಡಿದೆಬ್ಬಿಸಿದಾಗ ಅವರ ಸಪೋರ್ಟ್ ಉಪೇಂದ್ರಗೆ ಸಿಗಬಹುದು. ಮುಂದೆ ಬರುವ ಅಡೆತಡೆಗಳ ಬಗ್ಗೆ ನಾನು ಯೋಚನೆ ಮಾಡಲ್ಲ. ನನ್ನಲ್ಲಿ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ ಎಂಬ ಆಶಾವಾದದಿಂದ ಮುನ್ನುಗುವುದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಅಡೆತಡೆ ಬಂದಾಗ ಎದುರಿಸುವ ಸಾಮಥ್ರ್ಯ ತಾನೇ ಹುಟ್ಟಿಕೊಳ್ಳುತ್ತದೆ ಎಂದು ಹೇಳೀ ಉಪೇಂದ್ರ ರಾಜಕೀಯ ಜೀವನಕ್ಕೆ ಶುಭಹಾರೈಸಿದರು.
Advertisement
ಇಂದು ಬೆಳಗಿನ ಜಾವ ಕಾಶಿನಾಥ್ ವಿಧಿವಶರಾಗಿದ್ದು, ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Advertisement
https://www.youtube.com/watch?v=-s9cVIJZHTI